Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

ಎಕ್ಸ್​ಕ್ಯೂಸ್ ಮಿ ಸಿನಿಮಾದಲ್ಲಿ ರಮ್ಯಾ ಹಾಗೂ ಕೃಷ್ಣ ಅಜಯ್ ರಾವ್, ಸುನೀಲ್ ಸೂಪರ್ ಆಗಿ ನಟಿಸಿದ್ದರು. ಈ ಸಿನಿಮಾ ಕೂಡಾ ಸೂಪರ್ ಹಿಟ್ ಆಯಿತು. ಆದರೆ ಈ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದರು ರಮ್ಯಾ.

First published:

  • 17

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್​ನಲ್ಲಿ ಐದನೇ ಸೀಸನ್ ಆರಂಭಗೊಂಡಿದೆ. ಇದರಲ್ಲಿ ಮೊದಲ ಅತಿಥಿಯಾಗಿ ನಟಿ ರಮ್ಯಾ ಭಾಗವಹಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ರಮ್ಯಾ ಮಾತನಾಡಿದ್ದಾರೆ ನಟಿ.

    MORE
    GALLERIES

  • 27

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅಭಿನಯದ ಎರಡನೇ ಸಿನಿಮಾ ‘ಎಕ್ಸ್‌ಕ್ಯೂಸ್ ಮಿ’. ಆದರೆ ಈ ಸಿನಿಮಾಗೆ ನೋ ಎಂದು ಹೇಳಿದ್ದರಂತೆ ರಮ್ಯಾ. ಆಮೇಲೆ ಯಸ್ ಹೇಳಿದ್ದು ಹೇಗೆ? ಅದುವೇ ಸೂಪರ್ ಇಂಟ್ರೆಸ್ಟಿಂಗ್ ಸ್ಟೋರಿ.

    MORE
    GALLERIES

  • 37

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಈ ಚಿತ್ರದಲ್ಲಿ ನಟಿಸಲು ರಮ್ಯಾಗೆ ಇಷ್ಟವಿರಲಿಲ್ಲ. ಪ್ರೇಮ್ ಮಂಡ್ಯದ ಗೌಡ್ರು. ಅವರ ಸಿನಿಮಾ ಮಾಡು ಎಂದೇ ರಮ್ಯಾ ತಾಯಿ ಬಂದು ಮಗಳಿಗೆ ಹೇಳಿದ್ದರು. ಅಂತೂ ಮಂಡ್ಯದ ಗೌಡ್ರಿಗಾಗಿ ಎಕ್ಸ್​ಕ್ಯೂಸ್​ ಮಿ ಸಿನಿಮಾ ಮಾಡಿದ್ದರು ರಮ್ಯಾ.

    MORE
    GALLERIES

  • 47

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಸಂಜು ವೆಡ್ಸ್ ಗೀತಾ ಸಿನಿಮಾ ಮಾತ್ರವಲ್ಲ ಅದರ ಸಾಂಗ್​ಗಳೂ ಕೂಡಾ ಸೂಪರ್ ಹಿಟ್. ಆದರೆ ಹಣದ ಕೊರತೆಯಿಂದ ಸಿನಿಮಾ ಕಂಪ್ಲೀಟ್ ಮಾಡಲಾಗದೆ ನಾಗಶೇಖರ್‌ ಚಿತ್ರೀಕರಣವನ್ನ ನಿಲ್ಲಿಸಿಬಿಟ್ಟಿದ್ದರು. ಈ ವೇಳೆ ನಾಗಶೇಖರ್ ಪಾಲಿಗೆ ದೇವತೆಯಾದವರು ರಮ್ಯಾ.

    MORE
    GALLERIES

  • 57

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ತಮ್ಮ ಕೈಯಿಂದ ದುಡ್ಡು ಕೊಟ್ಟು ‘ಸಂಜು ವೆಡ್ಸ್ ಗೀತಾ’ ಚಿತ್ರ ಕಂಪ್ಲೀಟ್ ಆಗುವಂತೆ ಮಾಡಿದ್ದರು ಸ್ಯಾಂಡಲ್​ವುಡ್ ಕ್ವೀನ್. ‘ಸಂಜು ವೆಡ್ಸ್ ಗೀತಾ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿ ಸಕ್ಸಸ್​ಗೊಳಿಸಿದರು. ಈ ಸಿನಿಮಾಗಾಗಿ ರಮ್ಯಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ಸೈಮಾ ಪ್ರಶಸ್ತಿಯೂ ಬಂತು.

    MORE
    GALLERIES

  • 67

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಎಕ್ಸ್‌ಕ್ಯೂಸ್ ಮಿ ಸಿನಿಮಾ ಮಾಡೋಕೆ ನನಗೆ ಇಷ್ಟ ಇರಲಿಲ್ಲ. ಅಭಿ ರಿಲೀಸ್ ಆಗಲಿ ಆಮೇಲೆ ನೋಡೋಣ ಎಂದುಕೊಂಡಿದ್ದೆ. ಆದರೆ ಪ್ರೇಮ್ ಮಂಡ್ಯದವರು. ನನ್ನ ತಾಯಿಯನ್ನ ಮಂಡ್ಯದಲ್ಲಿ ಭೇಟಿ ಮಾಡಿದ್ದರು, ಅವರ ಮನವೊಲಿಸಿದರು ಎಂದು ನೆನಪಿಸಿಕೊಂಡಿದ್ದಾರೆ ನಟಿ.

    MORE
    GALLERIES

  • 77

    Weekend With Ramesh: ಗೌಡ್ರು ಸಿನಿಮಾ, ನೀನು ಮಾಡ್ಲೇಬೇಕು! ಮೊದಲಿಗೆ ಎಕ್ಸ್​ಕ್ಯೂಸ್​ ಮಿ ಸಿನಿಮಾ ಒಪ್ಪಿರಲಿಲ್ಲ ರಮ್ಯಾ

    ಅಭಿ ಸಿನಿಮಾದ ಸ್ಕ್ರಿಪ್ಟ್ ಹೇಳಿರಲಿಲ್ಲ. ಹೀಗಾಗಿ, ಸಿನಿಮಾ ಕಥೆ ಕೇಳಿಯೇ ಒಪ್ಪಿಕೊಳ್ಳೋದು ಅಂತ ನಾನು ಹೇಳಿದ್ದೆ. ಪ್ರೇಮ್ ಅವರು ನನಗೆ ಫಸ್ಟ್ ಹಾಫ್ ಕಥೆಯನ್ನ ಮಾತ್ರ ಹೇಳಿದ್ದರು. ಸೆಕೆಂಡ್ ಹಾಫ್ ಕಥೆ ಅವರು ಬರೆದೇ ಇರಲಿಲ್ಲ. ಮಂಡ್ಯ ಗೌಡ್ರು ಮಾಡು ಅಂತ ಅಮ್ಮ ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.

    MORE
    GALLERIES