20 ವರ್ಷಗಳ ಹಿಂದಿನ ಕೆಲವು ಫೋಟೋಗಳನ್ನು ಶೇರ್ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಅಭಿ ರಿಲೀಸ್ ಆದಾಗಿನ ಫೋಟೋಗಳಿವು. ಈ ಫೋಟೋಗಳನ್ನು ತೆಗೆದ ಕ್ಷಣಗಳ ನೆನಪು ಇಂದಿಗೂ ಹಸಿರಾಗಿದೆ ಎಂದಿದ್ದಾರೆ.
2/ 8
ನಟಿ ರಮ್ಯಾ ಇನ್ಸ್ಟಾಗ್ರಾಮ್ನಲ್ಲ 4 ಫೋಟೋಗಳನ್ನು ಶೇರ್ ಮಾಡಿ ಅದರೊಂದಿಗೆ ಭಾವುಕ ಬರಹವೊಂದನ್ನು ಶೇರ್ ಮಾಡಿದ್ದಾರೆ. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್ನಲ್ಲಿ ತೆಗೆದಿದ್ದು. ಸುಮ್ ಸುಮ್ನೆ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ.
3/ 8
ಎರಡನೇ ಫೋಟೋ ಚಿಕ್ಕಮಗಳೂರು ಶೂಟಿಂಗ್ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ಈ ನನ್ನ ಕಣ್ಣನೆ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
4/ 8
ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.
5/ 8
ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.
6/ 8
ಈ ಸಿನಿಮಾ ಸಿನಿಮಾ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು. ಬಾಕ್ಸ್ ಆಫೀಸಿನಲ್ಲಿ ಉತ್ತಮ ಗಳಿಕೆ ಕೂಡಾ ಮಾಡಿತ್ತು.
7/ 8
ನಂತರ ಸಿನಿಮಾ ತೆಲುಗಿಗೆ ಅಭಿಮನ್ಯು ಹೆಸರಿನಲ್ಲಿ ರಿಮೇಕ್ ಆಗಿತ್ತು. ತೆಲುಗು ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ನಾಯಕನಾದರೆ ನಾಯಕಿಯಾಗಿ ರಮ್ಯಾ ನಟಿಸಿದ್ದರು.
8/ 8
ಕೆ. ಕಲ್ಯಾಣ್, ಹಂಸಲೇಖ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಈ ಚಿತ್ರಕ್ಕೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದರು. 25 ಏಪ್ರಿಲ್ 2003 ರಂದು ಈ ಸಿನಿಮಾ ತೆರೆ ಕಂಡಿತ್ತು.
First published:
18
Ramya: ಅಭಿ ಸಿನಿಮಾಗೆ 20 ವರ್ಷ! ರಮ್ಯಾ ಭಾವುಕ ಪೋಸ್ಟ್