Actress Ramya: ವೆಬ್ ಸರಣಿ ನೋಡಿದ ಮೇಲೆ ಆ ನಟಿಯ ಫ್ಯಾನ್ ಆಗೋದ್ರಂತೆ ರಮ್ಯಾ: ರಶ್ಮಿಕಾಗೂ ಇಷ್ಟವಾಗಿದೆ ಆ ಕಲಾವಿದೆಯ ಅಭಿನಯ..!
ಸಾಮಾನ್ಯವಾಗಿ ಈ ನಟೀಮಣಿಯರು ಒಬ್ಬರನ್ನು ಮತ್ತೊಬ್ಬರು ಹೊಗಳುವುದು ವಿರಳ. ಆದರೆ ಕನ್ನಡದ ಮೋಹಕ ತಾರೆ ರಮ್ಯಾ ಹಾಗೂ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಮಾತ್ರ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಹ ನಟಿಯರ ಬಗ್ಗೆ ಹೊಗಳಿ ಕಮೆಂಟ್ ಮಾಡುತ್ತಿರುತ್ತಾರೆ. ಈಗಲೂ ಸಹ ರಶ್ಮಿಕಾ ಹಾಗೂ ರಮ್ಯಾ ಒಬ್ಬರು ಸ್ಟಾರ್ ನಟಿಯ ಬಗ್ಗೆ ಹೊಗಳಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಮೋಹಕ ತಾರೆ ರಮ್ಯಾ ಈಗ ಮತ್ತೊಬ್ಬ ನಟಿಯ ಫ್ಯಾನ್ ಆಗಿಬಿಟ್ಟಿದ್ದಾರಂತೆ.
2/ 8
ರಮ್ಯಾ ಇತ್ತೀಚೆಗೆ ತೆರೆಕಂಡ ಒಂದು ವೆಬ್ ಸರಣಿ ನೋಡಿದರಂತೆ. ಅದರಲ್ಲಿ ನಟಿಸಿರುವ ನಟಿಯ ಅಭಿನಯ ಎಷ್ಟು ಇಷ್ಟವಾಗಿದೆ ಅಂದರೆ ಆ ನಟಿಯ ಫ್ಯಾನ್ ಆಗುವಷ್ಟು ಅಂತೆ.
3/ 8
ಅದೇ ವೆಬ್ ಸರಣಿಯನ್ನು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸಹ ನೋಡಿದ್ದಾರೆ. ಅವರಿಗೂ ಅವರ ಅಭಿನಯ ತುಂಬಾ ಇಷ್ಟವಾಗಿದೆಯಂತೆ.
4/ 8
ಅಷ್ಟಕ್ಕೂ ಆ ವೆಬ್ ಸರಣಿ ಹಾಗೂ ಅದರಲ್ಲಿ ನಟಿಸಿರುವ ನಟಿ ಯಾರೂ ಅಂತೀರಾ..?
5/ 8
ದ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿ ಇತ್ತೀಚೆಗೆ ರಿಲೀಸ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕತವಾಗುತ್ತಿದೆ.
6/ 8
ಅದರಲ್ಲೂ ನಟಿ ಸಮಂತಾ ಅವರ ಅಭಿನಯಕ್ಕೆ ಮೆಚಚುಗೆಯ ಸುರಿ ಮಳೆಯಾಗುತ್ತಿದೆ.
7/ 8
ರಮ್ಯಾ ಸಹ ಈ ವೆಬ್ ಸರಣಿ ನೋಡಿದದಾರಂತೆ. ಮೊದಲ ಸೀಸನ ನೋಡದೆಯೇ ಕೇವಲ ಸಮಂತಾಗಾಗಿ 2ನೇ ಸೀಸನ್ ನೋಡಿದ್ದಾರಂತೆ ರಮ್ಯಾ. ಇದರಲ್ಲಿ ಸಮಂತಾ ಅವರ ಅಭಿನಯ ನೋಡಿ ಅವರಿಗೆ ಫ್ಯಾನ್ ಆಗಿಬಿಟ್ಟೆ ಎಂದು ತಮ್ಮ ಇನ್ಸ್ಟಾ ಸ್ಟೋರೀಸ್ನಲ್ಲಿ ಬರೆದುಕೊಂಡಿದ್ದಾರೆ.
8/ 8
ಇನ್ನು ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್, ರಾಕುಲ್ ಪ್ರೀತ್ ಸೇರಿದಂತೆ ಸಾಕಷಟು ಮಂದಿ ಸಮಂತಾ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ.