Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

Kannadathi-Ramola: ಕನ್ನಡತಿ ಧಾರಾವಾಹಿಗೆ ದಿಢೀರ್ ಅಂತ ಗುಡ್ ಬೈ ಹೇಳಿ ಹೋಗಿದ್ದಕ್ಕೆ ರಮೋಲಾ ಈಗ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಅವರ ಈ ತೀರ್ಮಾನ ದಿಢೀರ್ ನಿರ್ಧಾರ ಆಗಿರಲಿಲ್ಲವಂತೆ.

First published:

 • 19

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡ ಹೊಸ ಮುಖ ರಮೋಲಾ. ಕನ್ನಡತಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನಸು ಗೆದ್ದಿದ್ದರು. ಆದರೆ ದಿಢೀರ್ ಎಂದು ಅವರು ಧಾರಾವಾಹಿ ಬಿಟ್ಟು ಹೋದರು.

  MORE
  GALLERIES

 • 29

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ 'ಕನ್ನಡತಿ' ಕೊನೆ ಎಪಿಸೋಡ್ ತನಕವೂ ಚೆನ್ನಾಗಿಯೇ ಮೂಡಿಬಂದಿತ್ತು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಕೂಡ ಹೈಲೈಟ್ ಆಗಿದ್ದವು. ಇವುಗಳಲ್ಲಿ ಸಾನಿಯಾ ಪಾತ್ರ ಕೂಡ ಒಂದು.

  MORE
  GALLERIES

 • 39

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಕನ್ನಡತಿ ಧಾರಾವಾಹಿಯ ಸಾನಿಯಾ ಪಾತ್ರವನ್ನು ರಮೋಲಾ ಮಾಡುತ್ತಿದ್ದರು. ಆದರೆ ಧಾರಾವಾಹಿಯಿಂದ ಅರ್ಧದಲ್ಲೇ ರಮೋಲಾ ಹೊರಟು ಹೋದರು. ಆಗ ಅವರಿಗೆ ಹೊಸ ಸಿನಿಮಾ ಆಫರ್ ಸಿಕ್ಕಿದೆ. ಅದಕ್ಕಾಗಿಯೇ ಹೋಗುತ್ತಿದ್ದಾರೆ ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು.

  MORE
  GALLERIES

 • 49

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ರಮೋಲಾ ಜಾಗಕ್ಕೆ ಆರೋಹಿ ನೈನಾ ಬಂದು ಆ ಪಾತ್ರವನ್ನು ಮುಂದುವರಿಸಿದ್ದರು. ಆ ಸಂದರ್ಭ ರಮೋಲಾ ಅವರ ಪಾತ್ರವನ್ನು ಎಲ್ಲರೂ ಮಿಸ್ ಮಾಡಿಕೊಂಡಿದ್ದರು. ಆದರೆ ಶೀಘ್ರದಲ್ಲಿಯೇ ಹೊಸದಾಗಿ ಬಂದ ನಟಿ ಸಾನ್ಯಾ ಪಾತ್ರಕ್ಕೆ ಹೊಂದಿಕೊಂಡರು. ಇನ್ನು ಸೀರಿಯಲ್ ಕೂಡಾ ಚೆನ್ನಾಗಿ ಮೂಡಿ ಬರುತ್ತಿದ್ದ ಕಾರಣ ಇದು ಅಷ್ಟಾಗಿ ಬಾಧಿಸಲ್ಪಡಲಿಲ್ಲ.

  MORE
  GALLERIES

 • 59

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಕನ್ನಡತಿ ಧಾರಾವಾಹಿಗೆ ದಿಢೀರ್ ಅಂತ ಗುಡ್ ಬೈ ಹೇಳಿ ಹೋಗಿದ್ದಕ್ಕೆ ರಮೋಲಾ ಈಗ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಅವರ ಈ ತೀರ್ಮಾನ ದಿಢೀರ್ ನಿರ್ಧಾರ ಆಗಿರಲಿಲ್ಲವಂತೆ. ಸೀರಿಯಲ್ ಬಿಡುವ ಬಗ್ಗೆ ಮುಂಚಿನಿಂದಲೇ ಯೋಚನೆ ಇತ್ತು ಎಂದು ರಮೋಲಾ ಅವರೇ ಹೇಳಿದ್ದಾರೆ ಎಂದು ಖಾಸಗಿ ವೆಬ್​ಸೈಟ್ ವರದಿ ಮಾಡಿದೆ.

  MORE
  GALLERIES

 • 69

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಧಾರಾವಾಹಿ ಸೆಟ್‌ನಲ್ಲಿ ರಮೋಲಾಗೆ ಅವಮಾನ ಆಗುತ್ತಿತ್ತಂತೆ. ಈ ಕುರಿತಂತೆ ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ರಮೋಲಾ ಪ್ರತಿಕ್ರಿಯಿಸಿ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ ನಂತರವೇ ನಾನು ಕನ್ನಡತಿಯಲ್ಲಿ ಕ್ಯಾಮರಾ ಫೇಸ್ ಮಾಡಿದ್ದೆ ಎಂದಿದ್ದಾರೆ.

  MORE
  GALLERIES

 • 79

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಆದರೆ, ಕನ್ನಡತಿ ಸೆಟ್‌ನಲ್ಲಿ ಹೊಸಬರಿಗೆ ಅವಮಾನವಾಗುತ್ತಿತ್ತು. ಮರ್ಯಾದೆಯೂ ಸಿಗುತ್ತಿರಲಿಲ್ಲ. ಇದರಿಂದ ಬೇಜಾರಾಗಿತ್ತು ಎಂದು ರಮೋಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  MORE
  GALLERIES

 • 89

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಜೊತೆಗೆ ರಮೋಲಾಗೆ ಪೇಮೆಂಟ್ ವಿಚಾರದಲ್ಲೂ ಅಸಮಾಧಾನ ಇತ್ತು ಎನ್ನಲಾಗಿದೆ. ಪೇಮೆಂಟ್ ಚೆನ್ನಾಗಿಲ್ಲ ಎಂಬ ಕಾರಣದಿಂದ ಕನ್ನಡತಿ ಧಾರಾವಾಹಿಯಲ್ಲಿ ಮುಂದುವರೆಯಲು ಇಷ್ಟವಿಲ್ಲದೆ ರಮೋಲಾ ಹೊರಬಂದಿದ್ದಾರೆ ಎನ್ನಲಾಗಿದೆ.

  MORE
  GALLERIES

 • 99

  Ramola: ಹೊಸಬರಿಗೆ ಮರ್ಯಾದೆ ಇಲ್ಲ! ರಮೋಲಾ ಕನ್ನಡತಿಯಿಂದ ಹೊರಬಂದಿದ್ದೇಕೆ?

  ಸದ್ಯ ಫ್ಯಾಶನ್ ಡಿಸೈನಿಂಗ್ ಕೋರ್ಸ್ ನಲ್ಲಿ ನಟಿ ಫುಲ್ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಇವರು ಉತ್ತಮ ಬೆಲ್ಲಿ ಡ್ಯಾನ್ಸ‌ರ್ ಕೂಡ ಹೌದು. ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ನಟಿ ಎರಡು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

  MORE
  GALLERIES