ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
2/ 8
ಅತ್ತಿಗೆ ಅಪರ್ಣಾ ಸಾವಿಗೆ ಕಾರಣವಾದ ಚಾರು ಮೇಲೆ ರಾಮಾಚಾರಿಗೆ ತುಂಬಾ ಕೋಪ ಇದೆ. ಅವಳನ್ನು ಮಾತನಾಡಿಸುವುದು ಇರಲಿ, ಅವರ ನೆರಳು ನಮ್ಮ ಮನೆ ಕಡೆ ಬೀಳಬಾರದು ಅಂತಿದ್ದಾರೆ.
3/ 8
ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ತಮ್ಮ ಮನೆಯವರ ಸುದ್ದಿಗೆ ಬಂದವರಿಗೆ ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದುಕೊಳ್ಳುತ್ತಿದ್ದಾನೆ.
4/ 8
ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ಶೈಲು ಹೆಸರಲ್ಲಿ ರಾಮಾಚಾರಿ ಜೊತೆ ಮಾತನಾಡುತ್ತಿದ್ದಾಳೆ. ನಿಮ್ಮ ಮೇಲೆ ನನಗೆ ಪ್ರೀತಿ ಆಗಿದೆ ಎಂದು ಹೇಳ್ತಾ ಇದ್ದಾಳೆ.
5/ 8
ಇನ್ನು ರಾಮಾಚಾರಿಯ ನಿಜವಾರ ಹೆಸರು ರಿತ್ವಿಕ್ ಕೃಪಾಕರ. ಧಾರಾವಾಹಿಯಲ್ಲಿ ಮಾತ್ರ ಇವರ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಸಿಂಪಲ್. ಒಂದು ಬಡ ಕುಟುಂಬದ, ಸಂಪ್ರದಾಯಸ್ಥ ಮನೆತನದ ಹುಡುಗನಂತೆ.
6/ 8
ಆದ್ರೆ ರಿತ್ವಿಕ್ ನಿಜ ಜೀವನದಲ್ಲಿ ತುಂಬಾ ಸ್ಟೈಲಿಶ್ ಹುಡುಗ. ತಮ್ಮ ಅದ್ಭುತ ಲುಕ್ನಿಂದ ಅಭಿಮಾನಿಗಳನ್ನು ಸೆಳೆದಿದ್ದಾರೆ. ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚಿದ್ದಾರೆ.
7/ 8
ನನ್ನನ್ನ ದ್ವೇಷ ಮಾಡೋ ಹೊಸಬರು ಬೇಕು. ಹಳೆಯವರು ಅಭಿಮಾನಿಗಳಾಗಿದ್ದಾರೆ ಎಂದು ರಿತ್ವಿಕ್ ಕೃಪಾಕರ್ ಹೇಳಿದ್ದಾರೆ. ತಮ್ಮ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
8/ 8
ಸೂಪರ್ ಹೀರೋ ಸರ್ ನೀವು. ಲುಕ್ಕಿಂಗ್ ಗುಡ್, ಹ್ಯಾಂಡ್ಸಮ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ರಿತ್ವಿಕ್ ಅದಕ್ಕೆ ಥ್ಯಾಂಕ್ಸ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.