Yogi Adityanath-Akshay Kumar: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಭೇಟಿಯಾದ ಅಕ್ಷಯ್ ಕುಮಾರ್
ಇತ್ತೀಚೆಗಷ್ಟೆ ನಟಿ ಊರ್ವಶಿ ರೌಟೆಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು. ಈಗ ನಟ ಅಕ್ಷಯ್ ಕುಮಾರ್ ಅವರು ಯೋಗಿ ಅವರನ್ನು ಬೇಟಿ ಮಾಡಿದ್ದಾರೆ. ಅಕ್ಷಯ್ ಹಾಗೂ ಯೋಗಿ ಅವರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. (ಚಿತ್ರಗಳು ಕೃಪೆ ಟ್ವಿಟರ್ ಖಾತೆ)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ಲಕ್ನೋದಲ್ಲಿ ಭೇಟಿ ಮಾಡಿದ್ದಾರೆ.
2/ 11
ಅಕ್ಷಯ್ ಕುಮಾರ್ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿರುವುದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
3/ 11
ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾ ರಾಮ್ ಸೇತು ಚಿತ್ರದ ಮುಹೂರ್ತವನ್ನು ಅಯೋಧ್ಯೆಯಲ್ಲಿ ನೆರವೇರಿಸಿದ್ದಾರೆ.
4/ 11
ಈ ವೇಳೆ ಅಕ್ಷಯ್ ಕುಮಾರ್ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ.
5/ 11
ರಾಮ್ ಸೇತು ಸಿನಿಮಾವನ್ನು ಅಭೀಷೇಕ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ.
6/ 11
ಅಕ್ಷಯ್ ಕುಮಾರ್ ಅವರಿಗೆ ನಾಯಕಿಯಾಗಿ ಶ್ರೀಲಂಕಾ ಮೂಲದ ನಟಿ ಹಾಗೂ ರೂಪದರ್ಶಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಿದ್ದು, ನುಸ್ರತ್ ಭರೋಚಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
7/ 11
ರಾಮ್ ಸೇತು ಸಿನಿಮಾದ ಪೋಸ್ಟರ್ನಲ್ಲಿ ಅಕ್ಷಯ್ ಕುಮಾರ್.
8/ 11
ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
9/ 11
ಈ ಭೇಟಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ಯೋಗಿ ಆದಿತ್ಯನಾಥ್ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
10/ 11
ಉತ್ತರ ಪ್ರದೇಶದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಫಿಲ್ಮ್ ಸಿಟಿ ಕುರಿತಾಗಿ ಸಹ ಚರ್ಚಿಸಲಾಗಿದೆ ಎಂದೂ ಹೇಳಲಾಗುತ್ತಿದೆ.
11/ 11
ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಅಕ್ಷಯ್ ಕುಮಾರ್ ಭೇಟಿಯಾದಾಗ ತೆಗೆದ ಚಿತ್ರ