Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

ಶಾರುಖ್ ಅವರ ಹೆಸರು ಯಶ್​ಗಿಂತ ದೊಡ್ಡದು. ಆದರೆ ಯಶ್ ಅವರೇ 500 ಕೋಟಿ ಮಾಡಬಲ್ಲರು ಎಂದಾದರೆ ಶಾರುಖ್ 500 ಕೋಟಿ ಮಾಡುವುದು ಅಷ್ಟು ದೊಡ್ಡ ಸಂಗತಿ ಏನಲ್ಲ ಎಂದಿದ್ದಾರೆ ಆರ್​ಜಿವಿ.

First published:

 • 17

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಶಾರುಖ್ ಖಾನ್ ಅವರ ಸಿನಿಮಾ ಪಠಾನ್ ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್​ಫುಲ್ ಆಗಿ ಓಡುತ್ತಿದೆ. ದಾಖಲೆಗಳನ್ನು ಸೃಷ್ಟಿಸುತ್ತಿದೆ. ನಿಸ್ಸಂದೇಹವಾಗಿ ಈ ಸಿನಿಮಾ ಬಾಲಿವುಡ್‌ನ ವೈಭವವನ್ನು ಮರಳಿ ತಂದಿದೆ. ಅನೇಕರು ಚಿತ್ರತಂಡವನ್ನು ಹೊಗಳಿದ್ದಾರೆ.

  MORE
  GALLERIES

 • 27

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಹಾಗೆಯೇ ಅದನ್ನು ಟೀಕಿಸಿದವರೂ ಇದ್ದಾರೆ. ಈಗ ರಾಮ್ ಗೋಪಾಲ್ ವರ್ಮಾ ಸಹ ಶಾರುಖ್ ಅವರ ಇತ್ತೀಚಿನ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಗ್ಗೆ ಹಿರಿಯ ನಿರ್ದೇಶಕರು ಕೊಟ್ಟಿರುವ ಹೇಳಿಕೆ ವೈರಲ್ ಆಗಿದೆ.

  MORE
  GALLERIES

 • 37

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ದೇಶಾದ್ಯಂತ ಪಠಾಣ್ ಕ್ರೇಜ್ ಇದೆ. RGV ಎಂದೇ ಜನಪ್ರಿಯವಾಗಿರುವ ವರ್ಮಾ ಅವರು ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 47

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಯಶ್ ನಂತಹ ನಟ 500 ಕೋಟಿ ವ್ಯವಹಾರವನ್ನು ಮಾಡಬಹುದಾದರೆ ಶಾರುಖ್ ಖಾನ್ 500 ಕೋಟಿ ವ್ಯವಹಾರ ಮಾಡುವುದು ದೊಡ್ಡ ವಿಷಯವಲ್ಲ. ಹಿಂದಿ ಬೆಲ್ಟ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ದಕ್ಷಿಣದ ಚಿತ್ರಗಳ ಯಶಸ್ಸಿನ ಹಿಂದಿನ ಕಾರಣಗಳನ್ನು ಪರೀಕ್ಷಿಸಲು ಬಾಲಿವುಡ್​ಗೆ ತುಂಬಾ ಸಮಯ ಬೇಕಾಗಬಹುದು ಎಂದಿದ್ದಾರೆ.

  MORE
  GALLERIES

 • 57

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಈಗಿನ ಕಾಲದಲ್ಲಿ ಸ್ಟಾರ್ ಡಮ್ ಮೊದಲಿಗಿಂತ ಭಿನ್ನವಾಗಿದೆ ಎಂದು ಅವರು ತಿಳಿಸಿದ್ದಾರೆ. ಪಠಾಣ್ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿ, ರಾಮ್ ಗೋಪಾಲ್ ವರ್ಮಾ, ಶಾರುಖ್ ಅವರದ್ದು ಯಶ್‌ಗಿಂತ ದೊಡ್ಡ ಹೆಸರು. ಆದರೆ ಯಶ್ ಕೂಡ 500 ಕೋಟಿ ವ್ಯವಹಾರ ಮಾಡಬಲ್ಲರು ಎಂದಿದ್ದಾರೆ.

  MORE
  GALLERIES

 • 67

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಕಾಂತಾರ ದೊಡ್ಡ ಹಿಟ್ ಆಗಬಹುದಾದರೆ ಅಥವಾ ಪುಷ್ಪಾ- ಹಿಂದಿಯಲ್ಲಿ ಅಷ್ಟು ದೊಡ್ಡಮಟ್ಟದಲ್ಲಿ ಸಕ್ಸಸ್ ಆಗಿದ್ದರೆ ಸ್ಟಾರ್​ಡಮ್ ಎನ್ನುವ ಕಾನ್ಸೆಪ್ಟ್ ಮುಂಚಿನ ಹಾಗಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.

  MORE
  GALLERIES

 • 77

  Pathaan: ಯಶ್​ಗೆ ಹೋಲಿಸಿ ಶಾರುಖ್​ ಖಾನ್​ಗೆ ವ್ಯಂಗ್ಯ ಮಾಡಿದ RGV

  ಒಟಿಟಿ ಸಮಯದಲ್ಲಿ ಥಿಯೇಟರ್ ಕಲೆಕ್ಷನ್‌ಗಳು ಎಂದಿಗೂ ಉತ್ತಮವಾಗುವುದಿಲ್ಲ. ದಕ್ಷಿಣದ ಮಸಾಲಾ ನಿರ್ದೇಶಕರಂತೆ ಬಾಲಿವುಡ್ ಎಂದಿಗೂ ಕಮರ್ಷಿಯಲ್ ಬ್ಲಾಕ್‌ಬಸ್ಟರ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾನ್ ಚಿತ್ರವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

  MORE
  GALLERIES