ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪ್ರತಿನಿತ್ಯ ನಡೆಯುವ ಘಟನೆಗಳ ಬಗ್ಗೆ ಕಮೆಂಟ್ ಮಾಡುತ್ತಾರೆ. ಅದು ಜನರ ಮಧ್ಯೆ ಹಾಟ್ ಟಾಪಿಕ್ ಆಗುತ್ತದೆ. ಯಾರು ಏನೇ ಅಂದುಕೊಂಡರೂ ಡೋಂಟ್ ಕೇರ್ ಎನ್ನುವ ನಿರ್ದೇಶಕ ಎಲ್ಲವನ್ನೂ ಮುಕ್ತವಾಗಿ ಹೇಳುತ್ತಾರೆ. ಇತ್ತೀಚೆಗಷ್ಟೇ ರಾಜಮೌಳಿ ಕುರಿತು ಅವರು ಮಾಡಿದ ಟ್ವೀಟ್ಗಳು ಸಂಚಲನ ಮೂಡಿಸಿವೆ.
ನಿರ್ದೇಶಕ ರಾಜಮೌಳಿ ನಿರ್ದೇಶನದ, RRR ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಪಿರಿಯಾಡಿಕ್ ಆ್ಯಕ್ಷನ್ ಡ್ರಾಮಾವಾಗಿ ಬಿಡುಗಡೆಯಾಯಿತು. ದೊಡ್ಡಮಟ್ಟದಲ್ಲಿ ಯಶಸ್ಸನ್ನೂ ಗಳಿಸಿತು. ಈ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ವರ್ಮಾ ಶಾಕಿಂಗ್ ಕಮೆಂಟ್ ಮಾಡಿದ್ದಾರೆ.