Ram Charan: ಈ ಸೌತ್ ನಟ ತಮ್ಮ ಒಂದು ಶರ್ಟ್ಗೆ 1 ಲಕ್ಷಕ್ಕೂ ಹೆಚ್ಚು ಖುರ್ಚು ಮಾಡ್ತಾರೆ! ಶರ್ಟ್ ಹೇಗಿದೆ?
ರಾಮ್ ಚರಣ್ ಮತ್ತು ಉಪಾಸನಾ ಪೋಷಕರಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರೆಲ್ಲರೂ ಮೆಗಾ ಫ್ಯಾಮಿಲಿಯೊಂದಿಗೆ ತಮ್ಮ ಸಂತಸದ ಸುದ್ದಿಯನ್ನು ಸಂಭ್ರಮಿಸಿದ್ದಾರೆ. ರಾಮ್ ಚರಣ್ ಎಲ್ಲಾ ಮೆಗಾ ಹೀರೋಗಳೊಂದಿಗೆ ಕ್ರಿಸ್ಮಸ್ ಆಚರಿಸಿದರು. ಈ ಸಂದರ್ಭದಲ್ಲಿ ಚರಣ್ ಧರಿಸಿದ್ದ ಶರ್ಟ್ ಬೆಲೆ ಈಗ ವೈರಲ್ ಆಗಿದೆ.
ರಾಮ್ ಚರಣ್ ಉಪಾಸನಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೆಗಾ ಅಭಿಮಾನಿಗಳು ಬಹಳ ದಿನಗಳಿಂದ ಈ ಸಿಹಿಸುದ್ದಿಗೆ ಕಾಯುತ್ತಿದ್ದರು. ಉಪಾಸನಾ ಗರ್ಭಿಣಿಯಾಗಿದ್ದಾರೆ.
2/ 7
ಈ ಸಂತೋಷದ ಸಮಯದಲ್ಲಿ ಮೆಗಾ ಕುಟುಂಬವು ಕ್ರಿಸ್ಮಸ್ ಅನ್ನು ಅದ್ಧೂರಿಯಾಗಿ ಆಚರಿಸುತ್ತಿದೆ. ಅದರ ಭಾಗವಾಗಿ ಮೆಗಾ ಕುಟುಂಬದ ಬಹುತೇಕ ಎಲ್ಲಾ ಬಂಧುಗಳು ಒಂದಾಗಿದ್ದಾರೆ. ಉಪಾಸನಾ ಮತ್ತು ರಾಮ್ ಚರಣ್ ಈ ಮೆಗಾ ಪಾರ್ಟಿಯನ್ನು ಆಯೋಜಿಸಿದ್ದಾರೆ. ಮೇಲಾಗಿ ಉಪಾಸನಾ ಮತ್ತು ರಾಮ್ ಚರಣ್ ಅವರೇ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.
3/ 7
ಈ ಫೋಟೋದಲ್ಲಿ ರಾಮ್ ಚರಣ್, ಉಪಾಸನಾ, ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ, ಸಾಯಿ ಧರಂ ತೇಜ್, ವರುಣ್ ತೇಜ್, ನಿಹಾರಿಕಾ, ವೈಷ್ಣವ್ ತೇಜ್ ಇದ್ದಾರೆ. ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಮತ್ತೊಮ್ಮೆ ಈ ಫೋಟೋಗಳ ಮೂಲಕ ರಾಮ್ ಚರಣ್ ತಮ್ಮ ಸ್ಟೈಲಿಶ್ ಲುಕ್ಗಾಗಿ ಸುದ್ದಿಯಾಗಿದ್ದಾರೆ.
4/ 7
ಕ್ರಿಸ್ಮಸ್ ಆಚರಣೆಯಲ್ಲಿ ರಾಮ್ ಚರಣ್ ಧರಿಸಿದ್ದ ಶರ್ಟ್ನ ಬೆಲೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೆಗಾ ಫ್ಯಾಮಿಲಿ ಎಲ್ಲರೂ ಸೇರಿ ಮೋಜು ಮಸ್ತಿ ಮಾಡಿ ಚಿತ್ರಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗ ಎಲ್ಲರೂ ರಾಮ್ ಚರಣ್ ಶರ್ಟ್ ಬಗ್ಗೆ ಚರ್ಚಿಸುತ್ತಿದ್ದಾರೆ.
5/ 7
ರಾಮ್ ಚರಣ್ ಧರಿಸಿರುವ ಶರ್ಟ್ ಬೆಲೆ ರೂ.1,21,840. ತಿಳಿ ನೀಲಿ ಬಣ್ಣದ ಶರ್ಟ್ ಪ್ಯಾಚ್ ಡೀಟೇಲ್ ವರ್ಕ್ ಹೊಂದಿದೆ. ಶರ್ಟ್ ಬ್ರ್ಯಾಂಡ್ ಜೂನ್ಯಾ ವಟನಾಬೆ ಎಂದು ತೋರುತ್ತದೆ. ನೋಡಲು ಸಿಂಪಲ್ ಆಗಿರುವ ಈ ಶರ್ಟ್ ಬೆಲೆ ಇಷ್ಟು ದುಬಾರಿಯಾಗಿದೆಯಾ ಎನ್ನುತ್ತಿದ್ದಾರೆ ಅಭಿಮಾನಿಗಳು.
6/ 7
ರಾಮ್ ಚರಣ್ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಮೆಗಾ ಪವರ್ಸ್ಟಾರ್ ರಾಮ್ ಚರಣ್ ಅವರು ರಾಜಮೌಳಿ ನಿರ್ದೇಶನದ ಆರ್ಆರ್ಆರ್ ನಂತರ ಟಾಪ್ ನಿರ್ದೇಶಕರಲ್ಲೊಬ್ಬರಾದ ಶಂಕರ್ ಅವರೊಂದಿಗೆ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ದಿಲ್ ರಾಜು ನಿರ್ಮಿಸುತ್ತಿದ್ದಾರೆ.
7/ 7
ತ್ರಿಬಲ್ ಆರ್ ನಂತರ ರಾಮ್ ಚರಣ್ ಖ್ಯಾತಿ ದೊಡ್ಡಮಟ್ಟದಲ್ಲಿ ಹೆಚ್ಚಾಗಿದೆ. ನಟ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.