Upasana Konidela: ಸಂಕ್ರಾಂತಿ ದಿನ ಬೇಬಿ ಬಂಪ್ ತೋರಿಸಿದ ಉಪಾಸನಾ! ರಾಮ್ ಚರಣ್ ಪತ್ನಿ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ
ರಾಮ್ ಚರಣ್ ಪತ್ನಿ ಉಪಾಸನಾ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಪ್ರೆಗ್ನೆನ್ಸಿ ಗ್ಲೋ ಕಾಣಬಹುದು. ತನ್ನ ಹೊಟ್ಟೆಯಲ್ಲಿರುವ ಪುಟ್ಟ ಮಗುವಿಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಆನಂದವನ್ನು ಅನುಭವಿಸುವಂತೆ ಮಾಡಿದ ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದ ತಂಡದ ಭಾಗವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ಹೊಸ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಪ್ರೆಗ್ನೆನ್ಸಿ ಗ್ಲೋ ಕಾಣಬಹುದು.
2/ 7
ನಟಿ ಹೊಸ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಕ್ಯೂಟ್ ಫೋಟೋಸ್ ಇಲ್ಲಿವೆ.
3/ 7
ಹೌದು, ಇತ್ತೀಚಿನ ಚಿತ್ರಗಳಲ್ಲಿ, ಉಪಾಸನಾ ಕೊನಿಡೇಲಾ ತನ್ನ ಬೇಬಿ ಬಂಪ್ ಅನ್ನು ತೋರಿಸಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿಯೂ ಸಹ ಸ್ಟಾರ್ ಪತ್ನಿ ತನ್ನ ಮಗುವಿನ ಬಂಪ್ ನೋಡಲು ಅವಕಾಶ ಕೊಡಲಿಲ್ಲ.
4/ 7
ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮುಗ್ಧ ಮಗುವಿನ ನೋಟವನ್ನು ತೋರಿಸಿದ್ದಾರೆ.
5/ 7
ಈ ಚಿತ್ರಗಳನ್ನು ಹಂಚಿಕೊಂಡ ಉಪಾಸನಾ, 'ನನಗೆ ಈ ಸಂಕ್ರಾಂತಿ ಮಾತೃತ್ವ ಮತ್ತು ಹೊಸ ಆರಂಭವನ್ನು ಆಚರಿಸುವ ಅವಕಾಶ ಕೊಟ್ಟಿದೆ ಎಂದು ಬರೆದಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
6/ 7
ಇತ್ತೀಚಿನ ಚಿತ್ರಗಳಲ್ಲಿ ರಾಮ್ ಚರಣ್ ಅವರ ಪತ್ನಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಪ್ರೆಗ್ನೆನ್ಸಿ ಗ್ಲೋ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
7/ 7
ಜನರು ಉಪಾಸನಾ ಹಾಗೂ ಅವರ ಪತಿಯನ್ನು ತುಂಬಾ ಹೊಗಳುತ್ತಿದ್ದಾರೆ. ಸ್ಟಾರ್ ಕಪಲ್ ಪೋಸ್ಟ್ಗೆ ನೆಟ್ಟಿಗರು ಪ್ರೀತಿಯಿಂದ ಕಮೆಂಟ್ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.