ಸೀರೆ ಜೊತೆಗೆ ಉಪಾಸನ ಧರಿಸಿರುವ ನೆಕ್ ಪೀಸ್ ಸಹ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಮುಂಬೈ ಮೂಲದ ಪ್ರಸಿದ್ಧ ಆಭರಣ ವಿನ್ಯಾಸಕಿ ಬೀನಾ ಗೋಯೆಂಕಾ ಇದನ್ನು ತಯಾರಿಸಿದ್ದಾರೆ. ಈ ನೆಕ್ ಪೀಸ್ ತಯಾರಿಸಲು 4 ವರ್ಷ ತೆಗೆದುಕೊಂಡಿದ್ದಾರೆ. ನೈಸರ್ಗಿಕ ರತ್ನಗಳು ಮತ್ತು ಅತ್ಯುನ್ನತ ಗುಣಮಟ್ಟದ ಮುತ್ತುಗಳನ್ನು ಬಳಸಿ ನೆಕ್ಲೇಸ್ ತಯಾರಿಸಲಾಗಿದೆ. ಸುಮಾರು 400 ಕ್ಯಾರೆಟ್ ಗುಣಮಟ್ಟದ ಮಾಣಿಕ್ಯ ನೆಕ್ಲೇಸ್ ನಲ್ಲಿದೆ. ಇದು ಕೋಟಿ ಕೋಟಿ ಬೆಲೆ ಬಾಳುತ್ತದೆ. ಫೋಟೋ: Instagram