ಉಪಾಸನಾ ಕೊನಿಡೆಲಾ ಅವರು ಟ್ವೀಟ್ ಮಾಡುವ ಮೂಲಕ ಗಾಸಿಪ್ಗೆ ತೆರೆ ಎಳೆದಿದ್ದಾರೆ. ಅಲ್ಲದೇ ಅವರು ಹೇಳಿಕೆ ಕೂಡ ಬಿಡುಗಡೆ ಮಾಡಿದ್ದು, ಭಾರತದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಭಾರತದಲ್ಲಿನ ವಿಶ್ವದರ್ಜೆಯ ವೈದ್ಯರ ಜೊತೆಗೆ ಅಮೆರಿಕದ ಡಾ. ಜೆನ್ ಆಸ್ಟನ್ ಕೂಡ ಈ ವೇಳೆ ಉಪಾಸನಾ ಜೊತೆ ಇರಲಿದ್ದಾರೆ.