ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲವನ್ನು ಉಂಟುಮಾಡಿದೆ. ರೋನಿ ಸ್ಕ್ರೂವಾಲಾ ಅವರ ಆರ್ಎಸ್ವಿಪಿ ಸಿನಿಮಾದಡಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚುತ್ತಿದ್ದು, ಹೊಸ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇತ್ತೀಚೆಗೆ ಲಕ್ನೋದಲ್ಲಿ ಛತ್ರಿವಾಲಿ ಸಿನಿಮಾ ಆರಂಭಗೊಂಡಿದ್ದು, ಸಾಮಾಜಿಕ ಕೌಟುಂಬಿಕ ಮನರಂಜನೆಯ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ರಾಕುಲ್ ಅವರನ್ನು ಹಿಂದೆಂದೂ ನೋಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ
ರಾಕುಲ್ ಪ್ರೀತ್ ಸಿಂಗ್ ಸಾಕಷ್ಟು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ತಮಿಳು ಪ್ರಾಜೆಕ್ಟ್ಗಳಾದ ಇಂಡಿಯನ್ 2 ಮತ್ತು ಅಯಾಲೋನ್ನ ಸಿನಿಮದಲ್ಲೂ ನಟಿಸುತ್ತಿದ್ದಾರೆ. 2014 ರ ಯಾರಿಯನ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಈ ನಟಿ, ಮುಂದಿನ ದಿನಗಳಲ್ಲಿ ಹಲವಾರು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ರಾಕುಲ್ ಅವರ ಬಾಲಿವುಡ್ ಚಿತ್ರಗಳಲ್ಲಿ ಶಿ ಹ್ಯಾಸ್ ಅಟ್ಯಾಕ್, ಮೇಡೇ, ಥ್ಯಾಂಕ್ ಗಾಡ್ ಮತ್ತು ಡಾಕ್ಟರ್ ಜಿ ಸೇರಿವೆ.