Rakul Preet Singh: ಕರಣಂ ಮಲ್ಲೇಶ್ವರಿ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್..!
Karnam Malleshwari Biopic: ಟಾಲಿವುಡ್ನಲ್ಲಿ ಕರಣಂ ಮಲ್ಲೇಶ್ವರಿ ಅವರ ಬಯೋಪಿಕ್ ನಿರ್ಮಾಣವಾಗುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಈಗ ನಟಿ ಸಿಕ್ಕಿದ್ದಾರಂತೆ. (ಚಿತ್ರಗಳು ಕೃಪೆ: ರಾಕುಲ್ ಪ್ರೀತ್ ಸಿಂಗ್ ಇನ್ಸ್ಟಾಗ್ರಾಂ ಖಾತೆ)
ಕರಣಂ ಮಲ್ಲೇಶ್ವರಿ ಬಯೋಪಿಕ್ನ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ, ನಾಯಕಿಯ ಹುಡುಕಾಟದಲ್ಲಿತ್ತು.
2/ 22
ಟಾಲಿವುಡ್ನಲ್ಲಿ ನಿರ್ಮಾಣವಾಗುತ್ತಿರುವ ಕರಣಂ ಮಲ್ಲೇಶ್ವರಿ ಅವರ ಬಯೋಪಿಕ್ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದೆ.
3/ 22
ಜೂನ್ 1ರಂದು ಕರಣಂ ಮಲ್ಲೇಶ್ವರಿ ಅವರ ಹುಟ್ಟುಹಬ್ಬದಂದು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿತ್ತು ಚಿತ್ರತಂಡ.
4/ 22
ನಂತರ, ಈ ಸಿನಿಮಾಗಾಗಿ ನಿರ್ಮಾಪಕರಾದ ಎವಿವಿ ಸತ್ಯನಾರಾಯಣ ಹಾಗೂ ಕೋನಾ ವೆಂಕಟೇಶ್ ನಾಯಕಿಯ ಹುಡುಕಾಟದಲ್ಲಿದ್ದರು. ಅದಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಸಂಪರ್ಕಿಸಲಾಗಿತ್ತಂತೆ.
5/ 22
ಪಂಗಾ ಸಿನಿಮಾದಲ್ಲಿ ಕ್ರೀಡಾಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಂಗನಾರನ್ನು ಚಿತ್ರತಂಡ ಸಂಪರ್ಕಿಸಿತ್ತಂತೆ. ಆದರೆ ಕಂಗನಾ ಸದ್ಯಕ್ಕೆ ಆಗುವುದಿಲ್ಲ ಎಂದಿದ್ದರಂತೆ. ನಂತರ ತಾಪ್ಸಿ ಸಹ ಕೈತುಂಬ ಬೇರೆ ಸಿನಿಮಾಗಳಿವೆ ಡೇಟ್ ಸಮಸ್ಯೆ ಆಗುತ್ತದೆ ಎಂದು ನೋ ಎಂದಿದ್ದಾರಂತೆ.
6/ 22
ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸೋಕೆ ಫಿಟ್ ಆಗಿರುವ ನಟಿಯ ಹುಟುಕಾಟದಲ್ಲಿದ್ದರು ನಿರ್ಮಾಪಕರು. ಆಗ ಅವರಿಗೆ ಕಣ್ಣಿಗೆ ಬಿದ್ದದ್ದೇ ರಾಕುಲ್ ಪ್ರೀತ್ ಸಿಂಗ್.
7/ 22
ನ್ಯಾಷನಲ್ ಲೆವೆಟ್ ಗಾಲ್ಫ್ ಪ್ಲೇಯರ್ ಆಗಿದ್ದ ರಾಕುಲ್, ಸಖತ್ ಫಿಟ್ನೆಸ್ ಫ್ರೀಕ್ ಸಹ ಹೌದು. ಅದಕ್ಕೆ ಅವರನ್ನು ಕರಣಂ ಮಲ್ಲೇಶ್ವರಿ ಪಾತ್ರಕ್ಕಾಗಿ ಸಂಪರ್ಕಿಸಿದ್ದಾರಂತೆ.
8/ 22
ಈ ಪಾತ್ರದಲ್ಲಿ ನಟಿಸಲು ರಾಕುಲ್ ಸಹ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗುತ್ತಿದೆ.
9/ 22
ನಿತಿನ್ ಹಾಗೂ ಪವನ್ ಕಲ್ಯಾಣ್ ಜೊತೆ ಸಹ ಒಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
10/ 22
ಕಮಲ್ ಹಾಸನ್ ಅವರ ಇಂಡಿಯನ್ 2ನಲ್ಲೂ ರಾಕುಲ್ ಅಭಿನಯಿಸುತ್ತಿದ್ದಾರೆ.
11/ 22
ಸದ್ಯ ತಮ್ಮ ತಮ್ಮನೊಂದಿಗೆ ರಾಕುಲ್ ಹೈದರಾಬಾದಿನಲ್ಲೇ ಇದ್ದಾರೆ.