ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಹೊಸ ಅಲೆ ಎಬ್ಬಿಸಿರುವ ಶೆಟ್ರು ಟೀಮ್ ಇದೀಗ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಸೇರಿ ಜಾಲಿ ಟ್ರಿಪ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಶೆಟ್ರು ಗ್ಯಾಂಗ್ ಅಂತಾನೇ ಫೇಮಸ್ ಆಗಿರುವ ರಕ್ಷಿತ್ ಅಂಡ್ ರಿಷಬ್ ಟೀಮ್ ಇದೀಗ ಸಖತ್ ಬ್ಯುಸಿ ಆಗಿದೆ. ಸಾಲು ಸಾಲು ಸಿನಿಮಾಗಳು ಕೈ ಬೀಸಿ ಕರೆಯುತ್ತಿವೆ.
2/ 9
ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಸದ್ಯಕ್ಕೆ ಕೆಲಸಕ್ಕೆ ಕೊಂಚ ಬ್ರೇಕ್ ಕೊಟ್ಟಿದ್ದು ಫ್ಯಾಮಿಲಿ ಫ್ರೆಂಡ್ಸ್ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ.
3/ 9
ಟಾಲಿವುಡ್, ಬಾಲಿವುಡ್ ಅಂತ ಓಡಾಡುತ್ತಿದ್ದ ರಿಷಬ್ ಶೆಟ್ಟಿ, ಬಹಳ ದಿನಗಳ ಬಳಿಕ ಮತ್ತೆ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಹಾಲಿಡೇಸ್ ಎಂಜಾಯ್ ಮಾಡಿದ್ದಾರೆ. ಪತ್ನಿ ಹಾಗೂ ಮಗುವಿನ ಜೊತೆಗೆ ಸ್ನೇಹಿತರ ಜೊತೆ ಮಸ್ತಿ ಮಾಡಿದ್ದಾರೆ.
4/ 9
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಸಿನಿಮಾ ಸಕ್ಸಸ್ ಖುಷಿಯಲ್ಲಿ ರಕ್ಷಿತ್ ಶೆಟ್ಟಿ ನಾನಾ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಂಡಿದ್ದಾರೆ.
5/ 9
ತಮ್ಮದೇ ಪ್ರೊಡೆಕ್ಷನ್ ಹೌಸ್ ನಲ್ಲಿ ಸಾಲು ಸಾಲು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಚಿತ್ರದ ಶೂಟಿಂಗ್ನಲ್ಲೂ ಸಹ ಬ್ಯುಸಿ ಆಗಿದ್ದಾರೆ.
6/ 9
ಶೂಟಿಂಗ್ ಕೆಲಸದ ನಡುವೆ ಸ್ನೇಹಿತರನ್ನು ರಕ್ಷಿತ್ ಶೆಟ್ಟಿ ಮರೆತಿಲ್ಲ, ಒಟ್ಟಿಗೆ ಸೇರಿ ಒಳ್ಳೆ ಸಮಯ ಕಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
7/ 9
ಕಾಡು-ಮೇಡು ಅಲೆದಾಡಿದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
8/ 9
ಇದೇ ವೇಳೆ ರಿಷಬ್ ಶೆಟ್ಟಿ ಮಗುವನ್ನು ರಕ್ಷಿತ್ ಶೆಟ್ಟಿ ಎತ್ತಿಕೊಂಡು ಮುದ್ದಾಡಿದ್ದಾರೆ. ಮಗುವಿನ ಜೊತೆಗೆ ತೆಗೆದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
9/ 9
ಅರಣ್ಯದಲ್ಲಿನ ನಿಗೂಢತೆ, ಹರಿಯುವ ನೀರಿನಲ್ಲಿ ಪ್ರಶಾಂತತೆ, ಮಗುವಿನ ನಗುವಿನ ಧ್ವನಿ, ನನ್ನ ಸ್ಪೆಷಲ್ ಫ್ರೆಂಡ್ಸ್. ಆಹಾ ಜೀವನದ ಸಣ್ಣ ಸಂತೋಷಗಳು ಎಂದು ಬರೆದುಕೊಂಡಿದ್ದಾರೆ.