ಸ್ಯಾಂಡಲ್ವುಡ್ನಲ್ಲಿ ಶೆಟ್ಟಿ ಸ್ಟಾರ್ಗಳ ಸಂಖ್ಯೆ ಹೆಚ್ಚಾಗುತ್ತಾ ಇದೆ. ಶೈನ್ ಶೆಟ್ಟಿ, ಚಂದನ್ ಶೆಟ್ಟಿ ನಂತರ ಈಗ ರೂಪೇಶ್ ಶೆಟ್ಟಿ ಅವರೂ ಸೇರಿಕೊಂಡಿದ್ದಾರೆ.
2/ 7
ನಟ ಚಂದನ್ ಶೆಟ್ಟಿ ಬಿಗ್ ಬಾಸ್ ಸೀಸನ್ 5ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದರು. ಇದೇ ಸೀಸನ್ನಲ್ಲಿ ತಮ್ಮ ಬಾಳಸಂಗಾತಿಯನ್ನೂ ಕಂಡುಕೊಂಡರು. ನಿವೇದಿತಾ-ಚಂದನ್ ಭೇಟಿಯಾಗಿದ್ದು ಸೀಸನ್ 5ರಲ್ಲಿ.
3/ 7
ನಟ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 7ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಸೀಸನ್ನಲ್ಲಿ ಅವರಿಗೆ ದೀಪಿಕಾ ದಾಸ್ ಜೋಡಿಯಾಗಿದ್ದರು.
4/ 7
ಬಿಗ್ ಬಾಸ್ ಸೀಸನ್9ರಲ್ಲಿ ವಿನ್ನರ್ ಯಾರು ಎನ್ನುವ ಬಗ್ಗೆ ಭಾರೀ ಕುತೂಹಲವಿತ್ತು. ಕೊನೆಗೂ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಬಂದರು. ಈ ಮೂಲಕ ಬಿಗ್ಬಾಸ್ ಕಪ್ ಎತ್ತಿದ ಶೆಟ್ಟಿಗಳ ಸಂಖ್ಯೆ ಮೂರಾಗಿದೆ.
5/ 7
ನಟ ರಕ್ಷಿತ್ ಶೆಟ್ಟಿ ಅವರು ಸ್ಯಾಂಡಲ್ವುಡ್ನಲ್ಲಿ ಸೂಪರ್ ಹಿಟ್ ಆಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಅವರು ಕನ್ನಡದಲ್ಲಿ ಗಟ್ಟಿ ನೆಲೆಯೂರಿದ್ದಾರೆ. 777 ಚಾರ್ಲಿಯಂತೂ ಸೂಪರ್ ಹಿಟ್ ಆಗಿದೆ.
6/ 7
ರಿಷಭ್ ಶೆಟ್ಟಿ ಅವರ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ. ಕಾಂತಾರ ಸಿನಿಮಾ ಮೂಲಕ ಭಾರತ ಚಿತ್ರರರಂಗದಲ್ಲಿಯೇ ಹೊಸ ಅಲೆ ಎಬ್ಬಿಸಿದ್ದಾರೆ ಈ ನಟ.
7/ 7
ರಾಜ್ ಬಿ ಶೆಟ್ಟಿ ಅವರು ಕೆಲವೇ ಕೆಲವು ಸಿನಿಮಾ ಮಾಡಿದರೂ ಮಾಡಿದಾಗ ಮಾತ್ರ ಹಿಟ್ ಕೊಡೋದು ಪಕ್ಕಾ. ಅಷ್ಟರ ಮಟ್ಟಿಗೆ ಸ್ಯಾಂಡಲ್ವುಡ್ನಲ್ಲಿ ಅವರ ಹವಾ ಇದೆ. ಅಂತೂ ಶೆಟ್ಟಿ ಸ್ಟಾರ್ಸ್ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯಲ್ಲಿ ಹೈಲೈಟ್ ಆಗಿದ್ದಾರೆ.