Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

Rakshit Shetty: ರಕ್ಷಿತ್ ಶೆಟ್ಟಿ ಯಾವುದೇ ಚಿತ್ರ ಮಾಡಿದರೂ ವಿಭಿನ್ನವಾಗಿ ಮಾಡುತ್ತಾರೆ. ವರ್ಷಗಟ್ಟಲೆ ಶ್ರಮ ಹಾಕುತ್ತಾರೆ. ಪಾತ್ರಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾರೆ. ಇದೀಗ ರಕ್ಷಿತ್ ಶೆಟ್ಟಿ ಹೊಸ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

First published:

 • 18

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ರಕ್ಷಿತ್ ಶೆಟ್ಟಿ, ಅಭಿಮಾನಿಗಳನ್ನು ಪಾತ್ರದೊಳಗೆ ಮುಳುಗಿಸುವ ನಟನೆಯ ಕಲೆ ಇರುವ ವ್ಯಕ್ತಿ. ಯಾವುದೇ ಪಾತ್ರ ಕೊಡಿ ಅದಕ್ಕೆ ಜೀವ ತುಂಬುವ ವ್ಯಕ್ತಿತ್ವ. ಅವರು ಒಂದು ಪಾತ್ರವನ್ನು ಒಪ್ಪಿಕೊಂಡರೆ ಅದಕ್ಕೆ ಬೇಕಾದ ತಯಾರಿ ಮಾಡದೇ ಇರುವುದಿಲ್ಲ.

  MORE
  GALLERIES

 • 28

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ‘ಸಪ್ತ ಸಾಗರದಾಚೆ ಎಲ್ಲೋ , ಈ ಚಿತ್ರ ಹೆಸರು ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಸುದ್ದಿ ಮಾಡುತ್ತಿದೆ. ಈಗ ಆ ಚಿತ್ರದ ಫಸ್ಟ್​ ಲುಕ್ ಬಿಡುಗಡೆಯಾಗಿದ್ದು, ರಕ್ಷಿತ್​ ನೋಡಿ, ಫ್ಯಾನ್ಸ್ ಶಾಕ್​ ಆಗಿದ್ದಾರೆ.

  MORE
  GALLERIES

 • 38

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಹೌದು, ರಕ್ಷಿತ್​ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಇದು ರಕ್ಷಿತ್​ ಹೌದೋ, ಅಲ್ವವೋ ಎಂಬ ಅನುಮಾನ ಮೂಡಿಸಿತ್ತು. ಅಷ್ಟು ಬದಲಾಗಿದ್ದಾರೆ ರಕ್ಷಿತ್.

  MORE
  GALLERIES

 • 48

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಈ ಪಾತ್ರಕ್ಕಾಗಿ ರಕ್ಷಿತ್​ ತೂಕ ಹೆಚ್ಚಿಸಿಕೊಳ್ಳಬೇಕಿತ್ತು, ಅದಕ್ಕೆ 15 ರಿಂದ 20 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಫಸ್ಟ್​ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 58

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಅರ್ಧ ಭಾಗದ ಚಿತ್ರೀಕರಣಕ್ಕಾಗಿ ರಕ್ಷಿತ್​ ಶೆಟ್ಟಿ 15 ಕೆ.ಜಿ ತೂಕ ಇಳಿಸಿಕೊಂಡಿದ್ರು, ಆದ್ರೆ ಇನ್ನುಳಿದ ಭಾಗಕ್ಕೆ ತೂಕ ಹೆಚ್ಚಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  MORE
  GALLERIES

 • 68

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಈ ಹಿಂದೆ ರಕ್ಷಿತ್​ ಶೆಟ್ಟಿ ಯಶಸ್ವಿ ಚಿತ್ರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೂ ಹೇಮಂತ್ ರಾವ್ ನಿರ್ದೇಶಕರಾಗಿದ್ರು. ಇದೀಗ ಮತ್ತೆ ರಕ್ಷಿತ್,​ ಹೇಮಂತ್​ ಜೋಡಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗ್ತಿದ್ದಾರೆ.

  MORE
  GALLERIES

 • 78

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಈ ಸಿನಿಮಾವನ್ನು ಪುಷ್ಕರ್ ಚಿತ್ರ ನಿರ್ಮಾಣ ಸಂಸ್ಥೆಯ ಪುಷ್ಕರ ಮಲ್ಲಿಕಾರ್ಜುನ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್​ ಸಂಗೀತ ನಿರ್ದೇಶಕರಾಗಿದ್ದು, ಅವರ ಇತ್ತೀಚಿನ ಚಿತ್ರಗಳಾದ ಟಗರು, ಪಾಪ್ ಕಾರ್ನ್ ಮಂಕಿ ಟೈಗರ್ ಹಾಗೂ ಸಲಗ ಚಿತ್ರದ ಹಾಡುಗಳು ಸೂಪರ್ ಹಿಟ್​ ಆಗಿದ್ವು. ಪುನೀತ್​ ರಾಜ್​ಕುಮಾರ್ ಅವರ ಜೇಮ್ಸ್ ಚಿತ್ರಕ್ಕೂ ಇವರೇ ಸಂಗೀತ ನೀಡಿದ್ದರು.

  MORE
  GALLERIES

 • 88

  Rakshit Shetty: 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಫಸ್ಟ್​ ಲುಕ್ ರಿಲೀಸ್​ - ರಕ್ಷಿತ್​ ಶೆಟ್ಟಿ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

  ಇನ್ನು ಈ ಚಿತ್ರ ಕಥೆಯ ಬಗ್ಗೆ ಬಂದರೆ 2010ರಲ್ಲಿ ನಡೆಯುವ ಪ್ರೀತಿಯ ಕಥೆಯಾಗಿದ್ದು, ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಹಾಗೂ ಶಿವಮೊಗ್ಗದಲ್ಲೇ ನಡೆದಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವುದರಲ್ಲಿ ಅನುಮಾನವೇ ಇಲ್ಲ.

  MORE
  GALLERIES