ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಇತ್ತೀಚೆಗೆ ಆಲ್ಬಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಕ್ಯೂಟ್ ಆಗಿರುವ ಬೇಬಿ ಪಿಂಕ್ ಕಲರ್ ಡ್ರೆಸ್ ಧರಿಸಿದ್ದರು. ಆದಿಲ್ ಖಾನ್ ದುರಾನಿ ಜೊತೆ ಬ್ರೇಕಪ್ ನಂತರ ರಾಖಿ ಸಾವಂತ್ ಬ್ಯಾಕ್ ಟು ವರ್ಕ್ ಆಗಿದ್ದಾರೆ. ಹಲವಾರು ಆಲ್ಬಂ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಸಾಂಗ್ ಪ್ರಮೋಷನ್ ವೇಳೆ ಸುಂದರವಾದ ಗೌನ್ ಧರಿಸಿದ್ದರು. ಇದಕ್ಕೆ ವೈಟ್ ಕಲರ್ ಚಪ್ಪಲಿ ಧರಿಸಿದ್ದರು. ಈಗ ಸುದ್ದಿಯಾಗಿರೋದು ರಾಖಿ ಸಾವಂತ್ ಚಪ್ಪಲಿ. ರಾಖಿ ಸಾವಂತ್ ಧರಿಸಿದ ಚಪ್ಪಲಿಗೆ ಬರೋಬ್ಬರಿ 80 ಸಾವಿರ ರೂಪಾಯಿ. ಇದನ್ನು ನಟಿಯೇ ಸ್ವತಃ ಹೇಳಿದ್ದಾರೆ. ಹೈಲೀಲ್ಸ್ ಚಪ್ಪಲಿ ಸ್ಟೈಲಿಷ್ ಆಗಿದೆ. ದೀಪ್ ಹ್ಯಾಂಗಿಂಗ್ ನೆಕ್ ಇರುವಂತಹ ಗೌನ್ ಧರಿಸಿದ್ದ ರಾಖಿ ಸಾವಂತ್ ಅದ್ಭುತವಾಗಿ ಕಾಣಿಸಿದ್ದಾರೆ. ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಖಿ ಸಾವಂತ್ ಆದಿಲ್ ಮೋಸ ಮಾಡಿದ ನಂತರ ಕೋರ್ಟ್, ಕೇಸ್ ಕಚೇರಿ ಎಂದು ಬಹಳಷ್ಟು ಓಡಾಡಿದ್ದರು. ಆದಿಲ್ ಮಾಡಿದ ಮೋಸಕ್ಕೆ ಸರಿಯಾಗಿ ಬುದ್ಧಿ ಕೂಡಾ ಕಲಿಸಿದ್ದಾರೆ. ಆದಿಲ್ ಜೈಲು ಸೇರುವ ತನಕ ರಾಖಿ ಸಾವಂತ್ ಹೋರಾಡಿದ್ದಾರೆ. ಈಗ ಎಲ್ಲ ಚಿಂತೆಗಳಿಂದ ಹೊರಬಂದು ಕೆಲಸದತ್ತ ಗಮನ ಹರಿಸಿದ್ದಾರೆ.