ರಾಖಿ ಸಾವಂತ್ ಅವರು ಕೆಲವು ದಿನಗಳ ಹಿಂದೆ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದಿಲ್ ಅವರನ್ನು ಬಂಧಿಸಲಾಯಿತು. ನಟಿ ತನ್ನ ಪತಿ ವಿರುದ್ಧ ವಿವಾಹೇತರ ಸಂಬಂಧ ಮತ್ತು ವಂಚನೆ ಆರೋಪ ಮಾಡಿದ್ದಾರೆ. ನಟಿಯ ತಾಯಿ ಕೆಲ ದಿನಗಳ ಹಿಂದೆ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು. 44 ವರ್ಷದ ರಾಖಿ ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಆದಿಲ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ರಾಖಿ ಸಾವಂತ್ ಹಾಗೂ ಇತರ ಕೆಲವು ನಟಿಯರು ತಮ್ಮ ಪತಿ ವಿರುದ್ಧ ಆರೋಪ ಮಾಡಿದ್ದಾರೆ.