Rakhi Sawant: ಮದುವೆ ಆಗಿಯೇ ಇಲ್ಲ ಅಂತಿದ್ದಾನೆ ಆದಿಲ್! ಟ್ರಕ್ ಅಡಿಯಲ್ಲಿ ಬಿದ್ದು ಸಾಯೋಕೆ ಹೊರಟಿದ್ರಾ ರಾಖಿ?
ಇತ್ತೀಚಿಗೆ ಬೇಗಂ ಫಾತಿಮಾ ಆಗಿ ಬದಲಾದ ರಾಖಿ ಸಾವಂತ್ ಮೊನಾಲಿಸಾ ಅವರನ್ನು ಭೇಟಿಯಾದರು. ಅವರು ಭೋಜ್ಪುರಿ ನಟಿಯ ಮುಂದೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ರಾಖಿ ತನ್ನ ತಲೆಯ ಮೇಲೆ ಕೈಯಿಟ್ಟು ನೆಲದ ಮೇಲೆ ಕುಳಿತು ನನ್ನನ್ನು ಟ್ರಕ್ ಮುಂದೆ ಎಲ್ಲಾದರೂ ತಳ್ಳಿ ಬಿಡು ಎಂದು ರೋದಿಸಿದ್ದಾರೆ.
ಮೊನಾಲಿಸಾ ಮುಂದೆ ಸಾಯುವ ಬಗ್ಗೆ ರಾಖಿ ಸಾವಂತ್ ಮಾತನಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ರಾಖಿ ಸಾವಂತ್ ಮೊನಾಲಿಸಾ ಅವರನ್ನು ಭೇಟಿಯಾದಾಗ ನಡೆದ ಘಟನೆ ವೈರಲ್ ಆಗಿದೆ.
2/ 11
ರಾಖಿ ಅವರು ಭೋಜ್ಪುರಿ ನಟಿ ಮೋನಾಲಿಸಾ ಮುಂದೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ರಾಖಿ ನೆಲದ ಮೇಲೆ ಕುಳಿತು ತಲೆಯ ಮೇಲೆ ಕೈಯಿಟ್ಟುಕೊಂಡು ಅಳಲು ತೋಡಿಕೊಳ್ಳುತ್ತಾರೆ.
3/ 11
'ನನ್ನ ಪತಿ ನನ್ನನ್ನು ಮದುವೆಯಾದುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ನಮ್ಮ ಮದುವೆಯನ್ನೂ ಸಹ ನಿರಾಕರಿಸಿದರು ಎಂದಿದ್ದಾರೆ. ನಂತರ ರಾಖಿ ಎದ್ದುನಿಂತು ಮೊನಾಲಿಸಾಗೆ, ಟ್ರಕ್ ಬರುತ್ತಿದೆ, ನನ್ನನ್ನು ಅದರ ಮುಂದೆ ತಳ್ಳಿರಿ, ನಾನು ಸಾಯುತ್ತೇನೆ ಎಂದು ಹೇಳುತ್ತಾರೆ.
4/ 11
ನಂತರ, ರಾಖಿ ಸಾವಂತ್ ತನ್ನ ಮೊಬೈಲ್ನಲ್ಲಿ ಮೊನಾಲಿಸಾಗೆ ಮದುವೆಯ ಫೋಟೋಗಳು ಮತ್ತು ಮದುವೆಯ ಪ್ರಮಾಣಪತ್ರವನ್ನು ತೋರಿಸುತ್ತಾರೆ. ಈ ಬಗ್ಗೆ ಮೋನಾಲಿಸಾ ಅವರು ನಾನು ನೋಡಿದ್ದೇನೆ ಎನ್ನುತ್ತಾರೆ.
5/ 11
ನಾನು ಮದುವೆಯಾಗಿದ್ದೇನೆ. ನನ್ನ ಕೋರ್ಟ್ ಮ್ಯಾರೇಜ್ ಕೂಡಾ ನಡೆದಿದೆ. ಈ ಜನರು ಈಗ ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಪ್ರಮಾಣಪತ್ರ ನನ್ನ ಬಳಿ ಇದೆ ಎಂದಿದ್ದು ರಾಖಿಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
6/ 11
ರಾಖಿ ತನ್ನ ಗೆಳೆಯ ಆದಿಲ್ ದುರಾನಿಯನ್ನು ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅವರು ತಮ್ಮ ಮದುವೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
7/ 11
ಅವರು 7 ತಿಂಗಳ ಹಿಂದೆ ಆದಿಲ್ ಅವರನ್ನು ಮದುವೆಯಾಗಿದ್ದರು. ಆದರೆ ಈ ಮದುವೆಯನ್ನು ರಹಸ್ಯವಾಗಿಡಲು ಆದಿಲ್ ಒತ್ತಡ ಹೇರಿದ್ದರು. ನಿಕಾಹ್ ಜೊತೆಗೆ ಕೋರ್ಟ್ ಮ್ಯಾರೇಜ್ ಮಾಡಿದ್ದೇನೆ ಎಂದು ರಾಖಿ ಹೇಳಿದ್ದಾರೆ. ಆದರೆ, ಈ ವಿಷಯವನ್ನು ಇಲ್ಲಿಯವರೆಗೆ ಎಲ್ಲರಿಂದ ಮುಚ್ಚಿಟ್ಟಿದ್ದರು.
8/ 11
ಸಂದರ್ಶನವೊಂದರಲ್ಲಿ, ರಾಖಿ ಸಾವಂತ್ ತನ್ನ ಮದುವೆ ನಂತರ ಆದಿಲ್ಗೆ ದ್ರೋಹ ಬಗೆದಿದ್ದಾರೆ. ಈಗ ಲವ್ ಜಿಹಾದ್ ಭಯ ಕಾಡುತ್ತಿದೆ ಎಂದಿದ್ದಾರೆ. ಆದಿಲ್ ಮನೆಯವರು ಆತನ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಅವರು ಅವರೊಂದಿಗೆ ಮಾತನಾಡುತ್ತಿಲ್ಲ ಎಂದಿದ್ದಾರೆ ರಾಖಿ.
9/ 11
ಇಷ್ಟೇ ಅಲ್ಲ ಆದಿಲ್ ಬೇರೆ ಹುಡುಗಿ ಜೊತೆ ರಿಲೇಶನ್ ಶಿಪ್ ನಲ್ಲಿ ಇರುವುದರ ಬಗ್ಗೆಯೂ ರಾಖಿ ಮಾತನಾಡಿದ್ದಾರೆ. ಆದಿಲ್ ತನಗೆ ಮೋಸ ಮಾಡಿದ್ದಾನೆ. ಬೇರೊಬ್ಬ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
10/ 11
ಮದುವೆಯ ನಂತರವೂ ಅವರು ಬೇರೆಯವರೊಂದಿಗೆ ಇದ್ದಾರೆ. ಆದಿಲ್ ನ ಈ ಕೃತ್ಯವನ್ನು ನೋಡಿದ ರಾಖಿ ತನ್ನ ಮದುವೆಯ ಸತ್ಯವನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ. ಮದುವೆಯ ನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದೆ ಎಂದೂ ರಾಖಿ ಹೇಳಿದ್ದಾಳೆ.
11/ 11
ಅವರು ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದಾರೆ. ಮತ್ತೊಂದೆಡೆ, ಆದಿಲ್ ನಿಕಾಹ್ ಸುದ್ದಿಯನ್ನು ನಿರಾಕರಿಸಿದ್ದಾರೆ. ತಾನು ಮತ್ತು ರಾಖಿ ಮದುವೆಯಾಗಿಲ್ಲ ಎಂದಿದ್ದಾರೆ ಆದಿಲ್. ಈಗ ರಾಖಿ ಮತ್ತು ಆದಿಲ್ ಸಂಬಂಧದ ಸತ್ಯ ಗೊಂದಲಮಯವಾಗಿದೆ.