ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುವ ನಟಿ ರಾಖಿ ಸಾವಂತ್ (Rakhi Sawant) ತಾನೂ ಕೂಡ ಇಸ್ಲಾಂ ಧರ್ಮವನ್ನು (Islam Religion) ಸ್ವೀಕರಿಸಿದ್ದೇನೆ ಎಂದಿದ್ದಾರೆ. ಈ ಧರ್ಮವನ್ನು ನಾನು ನನ್ನ ಹೃದಯದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ. ಸದಾ ಒಂದಲ್ಲ ಒಂದು ವಿವಾದ ಮೈಮೇಲೆಳೆದುಕೊಳ್ಳುವ ರಾಖಿ ಕರಣ್ ಜೋಹರ್ (Karan Johar) ಹಾಗೂ ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆಯೂ ಮಾತನಾಡಿದ್ದಾರೆ.
ನನ್ನ ಪತಿ ಆದಿಲ್ ನನ್ನನ್ನು ಇಸ್ಲಾಂ ಸ್ವೀಕರಿಸುವಂತೆ ಮಾಡಿದ್ದರಿಂದ ನಾನು ಅದನ್ನು ಅನುಸರಿಸುತ್ತಿದ್ದೇನೆ ಎಂಬುದಾಗಿ ರಾಖಿ ಹೇಳಿದ್ದಾರೆ. ಇದು ನನ್ನ ಇಚ್ಛೆ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ನನ್ನ ತಾಯಿಯೊಂದಿಗೆ ನಾನು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದೆ. ಆದಿಲ್ ರನ್ನು ಮದುವೆಯಾದ ನಂತರ, ಅವರು ನನ್ನನ್ನು ಇಸ್ಲಾಂ ಸ್ವೀಕರಿಸುವಂತೆ ಮಾಡಿದರು.
'ಯೇ ಜಲ್ದಿ ಠೀಕ್ ಹೋಗಯಿ'! : ತಾಯಿಯ ನಿಧನದ ನಂತರ ಮತ್ತು ನನ್ನ ಮದುವೆಯ ಸಮಸ್ಯೆಯ ನಂತರ ಕೆಲವು ಅಭಿಮಾನಿಗಳು ನನ್ನ ಬಗ್ಗೆ ಅಸೂಯೆ ಪಟ್ಟಿದ್ದಾರೆ. “ಯೇ ಜಲ್ದಿ ಠೀಕ್ ಹೋಗಯಿ” ಅಂದರೆ ನಾನು ಬೇಗ ಸರಿಹೋದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇವರೆಂಥ ಜನರು ? ಅವರು ನನ್ನ ಸಂತೋಷವನ್ನು ಏಕೆ ನೋಡುವುದಿಲ್ಲ? ಅವರು ನನ್ನ ಬಟ್ಟೆ, ಜೀವನ, ಸಂತೋಷ ಮತ್ತು ದುಃಖದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ರಾಖಿ ಸಾವಂತ್ ಹೇಳಿದ್ದಾರೆ.