ಬಿಗ್ಬಾಸ್ ಖ್ಯಾತಿಯ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಬಹುಕಾಲದ ಗೆಳೆಯ ಆದಿಲ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಅವರ ವಿವಾಹದ ಫೋಟೋಸ್ ವೈರಲ್ ಆಗುತ್ತಿದೆ.
2/ 7
ಮೈಸೂರು ಮೂಲದ ಆದಿಲ್ ಖಾನ್ ದುರಾನಿಯ ಕೈ ಹಿಡಿದ ರಾಖಿ ಸಾವಂತ್ ಅವರು ಕೋರ್ಟ್ ಮ್ಯಾರೇಜ್ ಆಗಿದ್ದು ಅವರ ಮ್ಯಾರೇಜ್ ಸರ್ಟಿಫಿಕೇಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
3/ 7
ಫೋಟೋದಲ್ಲಿ ರಾಖಿ ಹಾಗೂ ಆದಿಲ್ ಮದುವೆ ಸರ್ಟಿಫಿಕೇಟ್ ಹಿಡಿದು ಪೋಸ್ ಕೊಡುವುದನ್ನು ಕಾಣಬಹುದು. ಸರಳವಾಗಿ ಮದುವೆ ನಡೆದಿದೆ.
4/ 7
ಇಬ್ಬರೂ ವಿವಾಹದ ವರಮಾಲೆ ಧರಿಸಿದ್ದನ್ನು ಕಾಣಬಹುದು. ಇನ್ನೊಂದು ಫೋಟೋದಲ್ಲಿ ದಂಪತಿ ಸರ್ಟಿಫಿಕೇಟ್ಗೆ ಸಹಿ ಮಾಡುತ್ತಿದ್ದರು.
5/ 7
ಬಿಗ್ ಬಾಸ್ ಮರಾಠಿ 4 ರ ನಂತರ, ರಾಖಿ ಆದಿಲ್ ಅವರೊಂದಿಗೆ ಮೊದಲಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ರಾಖಿ ರಿತೇಶ್ನಿಂದ ಬೇರ್ಪಟ್ಟ ನಂತರ ಇಬ್ಬರೂ ಡೇಟಿಂಗ್ ಪ್ರಾರಂಭಿಸಿದರು.
6/ 7
ಅವರು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು. ಆತನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆಕೆ, ನಂತರ ಮೈಸೂರಿನ ಉದ್ಯಮಿ ಆದಿಲ್ ಎಂಬಾತನನ್ನು ತನ್ನ ಗೆಳೆಯ ಎಂದು ಮಾಧ್ಯಮಗಳಿಗೆ ಹಾಗೂ ಅಭಿಮಾನಿಗಳಿಗೆ ಪರಿಚಯಿಸಿದ್ದರು ರಾಖಿ.
7/ 7
ರಾಖಿ ತನ್ನ ತಾಯಿ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವುದರಿಂದ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅವರು ತಮ್ಮ ತಾಯಿಯ ಶೀಘ್ರ ಚೇತರಿಸಿಕೊಳ್ಳಲು ಅಭಿಮಾನಿಗಳಿಂದ ಪ್ರಾರ್ಥನೆಯನ್ನು ಕೋರಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.