ನಟಿ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್ ಖಾನ್ನನ್ನು ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಇವರು ಕೋರ್ಟ್ ಮ್ಯಾರೇಜ್ ಆಗಿದ್ದು ಇವರ ಮದುವೆ ಫೋಟೋಗಳು ವೈರಲ್ ಆಗಿದೆ.
2/ 7
ಆದರೆ ಈಗಿರೋ ಅಪ್ಡೇಟ್ ಏನಪ್ಪಾ ಅಂದ್ರೆ ನಟಿ ರಾಖಿ ಸಾವಂತ್ ಅವರು ಆದಿಲ್ನನ್ನು ಮದುವೆಯಾಗಿ ತಮ್ಮ ಹೆಸರನ್ನು ಬದಲಾಯಿಸಿದ್ದಾರಂತೆ.
3/ 7
ರಾಖಿ ಸಾವಂತ್ ಅವರು ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಕುರಿತು ಅಪ್ಡೇಟ್ ಹೊರಬಿದ್ದಿದ್ದು ನಟಿ ತಮ್ಮ ಧರ್ಮ ಕೂಡಾ ಬದಲಾಯಿಸಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
4/ 7
ರಾಖಿ ಹಾಗೂ ಆದಿಲ್ ಡಾಕ್ಯುಮೆಂಟ್ಗಳಿಗೆ ಸಹಿ ಮಾಡುವ ಫೋಟೋ ಓಡಾಡುತ್ತಿದ್ದು ಇವರಿಬ್ಬರೂ ಸ್ವಲ್ಪ ಗ್ರ್ಯಾಂಡ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾಖಿ ಅವರು ರೆಡ್ ಕಲರ್ ಡ್ರೆಸ್ನಲ್ಲಿದ್ದರು.
5/ 7
ಮ್ಯಾರೇಜ್ ಸರ್ಟಿಫಿಕೇಟ್ನಲ್ಲಿ ಆದಿಲ್ ಹಾಗೂ ರಾಖಿ ಸಾವಂತ್ ಅವರ ಫೋಟೋವನ್ನು ಕೂಡಾ ಲಗತ್ತಿಸಲಾಗಿದೆ. ಸಟಿಫಿಕೇಟ್ನಲ್ಲಿ ಆದಿಲ್ ಖಾನ್ ದುರಾನಿ ಎಂದಿದ್ದು, ರಾಖಿ ಹೆಸರು ರಾಖಿ ಅನಂತ್ ಸಾವಂತ್ ಎಂದು ಇದೆ.
6/ 7
ಇದೀಗ ಬಾಲಿವುಡ್ನ ನಟಿಯೊಬ್ಬರು ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದು ಚರ್ಚೆಯಾಗುತ್ತಿದೆ. ನಟಿ ಸದ್ಯ ತಾಯಿ ಜೊತೆಗಿದ್ದು ಅವರ ತಾಯಿ ಕ್ಯಾನ್ಸರ್ ಹಾಗೂ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ.
7/ 7
ಅವಕಾಶಗಳ ಕೊರತೆ ಎದುರಿಸುತ್ತಿರುವ ರಾಖಿ ಸಾವಂತ್ ತಮಗೆ ಸಿಗುವ ಸಣ್ಣ ಕೆಲಸದ ಆಫರ್ ಕೂಡಾ ಬಿಡುತ್ತಿಲ್ಲ. ನಟಿ ತಾಯಿಯ ಚಿಕಿತ್ಸೆ ವೆಚ್ಚಕ್ಕಾಗಿಯೂ ಕಷ್ಟಪಡುತ್ತಿದ್ದಾರೆ.