ಮೈಸೂರು ಮೂಲದ ಆದಿಲ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ರಾಖಿ ಸಾವಂತ್ ಒಂದಲ್ಲ ಒಂದು ವಿಚಾರಕ್ಕೆ ಸದ್ದುಮಾಡುತ್ತಿದ್ದರು. ಆದಿಲ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದ ರಾಖಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ತುಂಬೆಲ್ಲಾ ರಾಖಿ ಸಾವಂತ್ ಅವರದ್ದೇ ಸುದ್ದಿ. ಕೆಲ ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ.
2/ 8
ಬಿಗ್ ಬಾಸ್ ಮರಾಠಿಯಿಂದ ಹೊರಬಂದ ನಂತರ, ಕ್ಯಾನ್ಸರ್ ರೋಗಿಯಾದ ತನ್ನ ತಾಯಿಗೆ ಈಗ ಬ್ರೈನ್ ಟ್ಯೂಮರ್ ಬಂದಿದೆ ಎಂದು ನಟಿ ಹೇಳಿದ್ದರು.
3/ 8
ಇದಾದ ಕೆಲ ದಿನಗಳ ನಂತರ, ನಟಿಯ ಗೆಳೆಯ ಆದಿಲ್ ದುರಾನಿ ಜೊತೆಗಿನ ಮದುವೆಯ ಫೋಟೋಗಳು ವೈರಲ್ ಆಗಿದ್ದವು.
4/ 8
ನಂತರ ಕೆಲವು ದಿನಗಳ ಕಾಲ ಆದಿಲ್ ಮದುವೆಯಾಗಲು ನಿರಾಕರಿಸಿದ ಎಂದು ಸುದ್ದಿ ವೈರಲ್ ಆಯಿತು. ನಿನ್ನೆ ಆದಿಲ್ ಮತ್ತು ರಾಖಿ ಸಾವಂತ್ ಇಬ್ಬರು ತನ್ನ ತಾಯಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ವಿಡಿಯೋ ವೈರಲ್ ಆಗಿವೆ.
5/ 8
ಈ ನಡುವೆ ರಾಖಿ ಸಾವಂತ್ ಇದೀಗ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಖಿ ಸಾವಂತ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನಟಿ ಶರ್ಲಿನ್ ಚೋಪ್ರಾ ದಾಖಲಿಸಿದ್ದ ಎಫ್ ಐ ಆರ್ಗೆ ಸಂಬಂಧಿಸಿದ್ದಂತೆ ರಾಖಿ ಅವರನ್ನು ಬಂಧಿಸಲಾಗಿದೆ.
6/ 8
ಇಂದು (ಜನವರಿ 19) ಮಧ್ಯಾಹ್ನ ರಾಖಿ ಸಾವಂತ್ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
7/ 8
'ಅಂಬೋಲಿ ಪೊಲೀಸರು ಎಫ್ಐಆರ್ 883/2022 ಗೆ ಸಂಬಂಧಿಸಿದಂತೆ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. ನಿನ್ನೆ, ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ ಕೋರ್ಟ್ ತಿರಸ್ಕರಿಸಿತ್ತು' ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.
8/ 8
ಮೈಸೂರು ಮೂಲದ ಆದಿಲ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ರಾಖಿ ಸಾವಂತ್ ಒಂದಲ್ಲೊಂದು ವಿಚಾರಕ್ಕೆ ಸದ್ದುಮಾಡುತ್ತಿದ್ದರು. ಆದಿಲ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದ ರಾಖಿಗೆ ಪೊಲೀಸರು ಶಾಕ್ ನೀಡಿದ್ದಾರೆ.