ರಾಖಿ ಸಾವಂತ್-ಆದಿಲ್ ಖಾನ್ ದುರಾನಿ ಮದುವೆಯಾಗಿದ್ದು ಬಾಲಿವುಡ್ನ ಲೇಟೆಸ್ಟ್ ಜೋಡಿಯಾಗಿ ಮುಂಬೈನಲ್ಲಿ ಸುತ್ತಾಡುತ್ತಿದ್ದಾರೆ. ಆದಿಲ್ನನ್ನು ಮದುವೆಯಾದ ನಂತರ ರಾಖಿ ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದಾರೆ.
2/ 9
ಇವರಿಬ್ಬರ ವಿವಾಹ ವಿಚಾರ ಮುನ್ನೆಲೆಗೆ ಬಂದಾಗ ಇದನ್ನು ಲವ್ ಜಿಹಾದ್ ಎಂದು ಬಹಳಷ್ಟು ಜನರು ಹೇಳಿದ್ದರು. ಈಗ ಈ ಬಗ್ಗೆ ದಂಪತಿ ಪ್ರತಿಕ್ರಿಯಿಸಿದ್ದಾರೆ.
3/ 9
ನಟಿ ರಾಖಿ ಸಾವಂತ್ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಸಲಿಗೆ ಲವ್ ಜಹಾದ್ ಎಂದರೇನು ಎಂದು ಪ್ರಶ್ನೆ ಮಾಡಿದ್ದಾರೆ.
4/ 9
ಅದೇ ರೀತಿ ಆದಿಲ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ ಲವ್ ಜಿಹಾದ್ ಎಂದರೇನು ಎಂದು ನನಗೂ ಗೊತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ್ದಾರೆ.
5/ 9
ಆ ನಂತರ ಪ್ರತಿಕ್ರಿಯಿಸಿದ ರಾಖಿ ಸಾವಂತ್ ನಾನು ಮುಸ್ಲಿಂ ಪದ್ಧತಿಯಂತೆ ಮದುವೆಯಾಗಿದ್ದೇನೆ. ನನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿದ್ದೇನೆ ಎಂದಿದ್ದಾರೆ.
6/ 9
ಫಾತಿಮಾ ಹಾಗೂ ಆದಿಲ್ ಜುಲೈನಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇವರದ್ದು ಕೋರ್ಟ್ ಮ್ಯಾರೇಜ್ ಆಗಿದ್ದು ಮ್ಯಾರೇಜ್ ಸರ್ಟಿಫಿಕೇಟ್ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
7/ 9
ಆದಿಲ್ ಖಾನ್ ದುರಾನಿ ಕರ್ನಾಟಕದ ಮೈಸೂರಿನವನಾಗಿದ್ದು ಈಗ ರಾಖಿ ಸಾವಂತ್ ಕರ್ನಾಟಕದ ಸೊಸೆಯಾಗಿದ್ದಾರೆ. ಇವರ ಜೋಡಿ ಈಗ ಫೇಮಸ್ ಆಗಿದೆ.
8/ 9
ರಾಖಿ ಸಾವಂತ್ ಅವರು ಆದಿಲ್ ಮದುವೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ವಿಡಿಯೋ ಹಾಗೂ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
9/ 9
ರಾಕಿ ಸಾವಂತ್ ಪ್ರತಿಕ್ರಿಯಿಸಿ, ನಾನು ಆದಿಲ್ನನ್ನು ಪಡೆಯಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆ. ಹೆಸರು ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.