ಮದುವೆಯ ಬಳಿಕ ಪತ್ರಲೇಖಾ ಹಾಕಿರುವ ಮಂಗಳಸೂತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಪತ್ರಲೇಖಾ ಮದುವೆಯ ನಂತರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಆಕೆಯ ಕುತ್ತಿಗೆಯಲ್ಲಿರುವ ಮಂಗಳಸೂತ್ರದ ಬಗ್ಗೆ ಬಹಳ ಚರ್ಚೆಯಾಗ್ತಿದೆ. ಮದುವೆ ಬಳಿಕ ರಾಜ್ಕುಮಾರ್ ರಾವ್ ಮತ್ತು ಪತ್ರಲೇಖಾ 2 ದಿನಗಳ ಹಿಂದೆ ಮುಂಬೈಗೆ ಮರಳಿದರು. ಪತ್ರಲೇಖಾ ಅವರು ವಿಮಾನ ನಿಲ್ದಾಣದಲ್ಲಿ ಕೆಂಪು ಬಣ್ಣದ ರೇಷ್ಮೆ ಸೀರೆಯೊಂದಿಗೆ ಕಂಗೊಳಿಸುತ್ತಿದ್ದರು. ಅದರೊಂದಿಗೆ ಅವರು ಹಾಕಿದ್ದ ಮಂಗಳಸೂತ್ರ ಸಖತ್ ವೈರಲ್ ಆಗ್ತಿದೆ. ಇದಕ್ಕೆ ಕಾರಣ ಏನು ಅಂತೀರಾ? ಮುಂದೆ ಓದಿ.
ಪತ್ರಲೇಖಾ ಮತ್ತು ರಾಜ್ಕುಮಾರ್ ರಾವ್ ಅವರು ತಮ್ಮ ಮದುವೆಗೆ ಸಬ್ಯಸಾಚಿ ಮುಖರ್ಜಿ ಡಿಸೈನ್ ಉಡುಪುಗಳನ್ನು ಧರಿಸಿದ್ದರು. ರಾಜ್ಕುಮಾರ್ ತಮ್ಮ ಪತ್ನಿ ಪತ್ರಲೇಖಾ ಅವರಿಗೆ ನೀಡಿದ ಮಂಗಳಸೂತ್ರವನ್ನು ಸಹ ಸಬ್ಯಸಾಚಿ ವಿನ್ಯಾಸಗೊಳಿಸಿದ್ದಾರೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಮಂಗಳಸೂತ್ರವನ್ನು 18 ಕ್ಯಾರೆಟ್ ಚಿನ್ನ, ಮುತ್ತು ಮತ್ತು ಹೆಸ್ಸೋನೈಟ್ ಗಾರ್ನೆಟ್ ಕಲ್ಲಿನಿಂದ ಮಾಡಲಾಗಿದೆ. ಇದು ಮತ್ತಷ್ಟು ಚಿನ್ನ ಮತ್ತು ಕಪ್ಪು ಮೋತಿಯಿಂದ ಅಲಂಕರಿಸಲ್ಪಟ್ಟಿದೆ. ಈ ಮಂಗಳಸೂತ್ರದ ಬೆಲೆ ಬರೋಬ್ಬರಿ ₹1 ಲಕ್ಷ 65 ಸಾವಿರ.