ರಿಲೀಸ್ ದಿನಾಂಕ ಪ್ರಕಟಿಸಿದ ನಿನ್ನ ಸನಿಹಕೆ ಸಿನಿಮಾ: ಪ್ರೇಕ್ಷಕರ ಮುಂದೆ ಬರಲಿದ್ದಾರೆ ರಾಜ್​ಕುಮಾರ್ ಮೊಮ್ಮಗಳು Dhanya Ramkumar

ರಾಜ್​ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್​ ಎಂಟ್ರಿಗೆ ವೇದಿಕೆ ಸಜ್ಜಾಗಿತ್ತು. ಎಲ್ಲ ಸರಿಯಾಗಿದ್ದಿದ್ದರೆ ಕಳೆದ ಆಗಸ್ಟ್​ನಲ್ಲೇ ನಿನ್ನ ಸನಿಹ ಮೂಲಕ ಧನ್ಯಾ ನಾಯಕಿಯಾಗಿ ಕನ್ನಡ ಸಿನಿಪ್ರಿಯರಿಗೆ ಪರಿಚಯವಾಗಿರುತ್ತಿದ್ದರು. ಆದರೆ ಕೊರೋನಾ ಆತಂಕದ ಹಿನ್ನಲೆಯಲ್ಲಿ ಚಿತ್ರಮಂದಿರಗಳು ಬಾಗಿಲಿ ಮುಚ್ಚಿದ್ದವು. ಆಗ ಈ ಚಿತ್ರದ ರಿಲೀಸ್​ ಅನ್ನು ಮುಂದೂಡಲಾಗಿತ್ತು. ಆದರೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕ ಪ್ರಕಟಿಸಿದೆ. (ಚಿತ್ರಗಳು ಕೃಪೆ: ಧನ್ಯಾ ರಾಮ್​ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: