Rare Photos Of Rajiv Kapoor: ಹೃದಯಾಘಾತ... ಬಾಲಿವುಡ್ನ ಹಿರಿಯ ನಟ ರಾಜೀವ್ ಕಪೂರ್ ನಿಧನ..!
RIP Rajiv Kapoor: ರಾಜ್ ಕಪೂರ್ ಅವರ ಕಿರಿಯ ಮಗ ಹಾಗೂ ರಿಷಿ ಕಪೂರ್ ಅವರ ಸಹೋದರ 58 ವರ್ಷದ ರಾಜೀವ್ ಕಪೂರ್ ಇಹಲೋಕ ತ್ಯಜಿಸಿದ್ದಾರೆ. 1983ರಲ್ಲಿ ಏಕ್ ಜಾನ್ ಹೈ ಹಮ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟ, 1985ರಲ್ಲಿ ಅಪ್ಪ ರಾಜ್ ಕಪೂರ್ ನಿರ್ದೇಶನದ ರಾಮ್ ತೇರಿ ಗಂಗಾ ಮೇಲಿ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ನಟಿಸಿದರು. ಇಂದು ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಚಿಕಿತ್ಸೆ ನೀಡುವ ಮುನ್ನವೇ ರಾಜೀವ್ ಕಪೂರ್ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. (ಚಿತ್ರಗಳು ಕೃಪೆ: ಟ್ವಿಟರ್)