ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ಭಾರೀ ಸುದ್ದಿಯಾಗಿದ್ದಾರೆ. ಈ ವೇಳೆ ಅವರು ರಾಜಕೀಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಗ್ಗೆ ಮಾತಾಡಿದ್ದು, ವೆಂಕಯ್ಯ ನಾಯ್ಡು ಅವರಿಗೆ ಹಿಂದೆ ಉಪರಾಷ್ಟ್ರಪತಿ ಹುದ್ದೆ ನೀಡಿದ್ದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ ಎಂದಿದ್ದಾರೆ. ಟ್ವಿಟರ್/ಫೋಟೋ)
ಮಾರ್ಚ್ 11 ರ ರಾತ್ರಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಫಿಯನ್ಸ್ ಹೆಲ್ತ್ ಫೌಂಡೇಶನ್ನ ಬೆಳ್ಳಿ ಸಂಭ್ರಮಾಚರಣೆಯಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಜನಿಕಾಂತ್ ಭಾಗವಹಿಸಿದ್ದರು. ಆರೆಸ್ಸೆಸ್ ನಿಂದ ಕೇಂದ್ರ ಸಚಿವರಾಗಿ, ಉಪರಾಷ್ಟ್ರಪತಿಯಾದ ವೆಂಕಯ್ಯನಾಯ್ಡು ಅವರು ಬೇಗ ರಾಜಕೀಯ ತೊರೆಯುವುದು ನನಗೆ ಇಷ್ಟವಿಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ.