Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

Super Flop Star Kids: ನಟನೆ ಯಾರಿಂದಲೂ ಬರುವುದಲ್ಲ. ಅದು ಪ್ರತಿಯೊಬ್ಬರ ಸ್ವಂತ ಪ್ರತಿಭೆ. ಅನೇಕ ಖ್ಯಾತ ಸ್ಟಾರ್ ನಟ, ನಟಿಯರ ಮಕ್ಕಳು ಇಂಡಸ್ಟ್ರಿಗೆ ಸುಲಭವಾಗಿ ಎಂಟ್ರಿ ಕೊಡುತ್ತಾರೆ. ಆದರೆ ಪ್ರತಿಭೆ ಇದ್ದವರು ಮಾತ್ರ ಸೂಪರ್​ಸ್ಟಾರ್ ಆಗುತ್ತಾರೆ. ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಪುತ್ರಿ ಟ್ವಿಂಕಲ್ ಖನ್ನಾ ಸ್ಟೋರಿ ಕೂಡಾ ಇದೇ.

First published:

  • 19

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಟಾರ್ ನಟ, ನಟಿಯರ ಮಕ್ಕಳನ್ನು ತೆರೆಯ ಮೇಲೆ ನೋಡಲು ಇಷ್ಟಪಡುತ್ತಾರೆ. ಅಥವಾ ಅವರು ಮಕ್ಕಳಲ್ಲಿ ತಮ್ಮ ನೆಚ್ಚಿನ ಸ್ಟಾರ್​​ನನ್ನು ಕಂಡುಕೊಳ್ಳುತ್ತಾರೆ. ಈ ಕಾರಣಕ್ಕಾಗಿ, ಅನೇಕ ಚಲನಚಿತ್ರ ತಾರೆಯರ ಮಕ್ಕಳು ಚಲನಚಿತ್ರಗಳಲ್ಲಿ ಮಾತ್ರ ತಮ್ಮ ಅದೃಷ್ಟ ಪ್ರಯತ್ನಿಸುತ್ತಾರೆ. ಕೆಲವರು ಯಶಸ್ಸಿನ ಉತ್ತುಂಗವನ್ನು ತಲುಪಿದ್ದರೆ ಕೆಲವರು ಕಾಲಕ್ಕೆ ತಕ್ಕಂತೆ ಹೆಸರೇ ಇಲ್ಲದೆ ಸೈಲೆಂಟಾಗಿದ್ದಾರೆ.

    MORE
    GALLERIES

  • 29

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಆಲಿಯಾ ಭಟ್, ಕರೀನಾ ಕಪೂರ್, ರಣಬೀರ್ ಕಪೂರ್ ಮುಂತಾದ ತಾರೆಗಳು ತಮ್ಮ ಕುಟುಂಬದ ನಟನಾ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಆದರೆ ಅಬ್ಬರದಿಂದ ಪ್ರಾರಂಭಿಸಿ ಪ್ರೇಕ್ಷಕರನ್ನು ನಿರಾಶೆಗೊಳಿಸಿರುವ ಅನೇಕ ಸ್ಟಾರ್ ಕಿಡ್​ಗಳಿದ್ದಾರೆ. ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಸ್ಟೋರಿ ಇದಕ್ಕಿಂತ ಭಿನ್ನವಾಗಿಲ್ಲ.

    MORE
    GALLERIES

  • 39

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಇಬ್ಬರೂ ತಮ್ಮ ಕಾಲದ ಪ್ರಸಿದ್ಧ ತಾರೆಗಳಾಗಿದ್ದರು. ರಾಜೇಶ್ ಖನ್ನಾ ಹುಚ್ಚುತನದ ಬಗ್ಗೆ ಅನೇಕ ಕಥೆಗಳಿವೆ. ಅಲ್ಲದೇ ಅವರ ಸತತ 15 ಹಿಟ್ ಚಿತ್ರಗಳನ್ನು ನೀಡಿದ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಮತ್ತೊಂದೆಡೆ, ಡಿಂಪಲ್ ಕಪಾಡಿಯಾ ತಮ್ಮ ಚೊಚ್ಚಲ ಚಿತ್ರ 'ಬಾಬಿ' ಮೂಲಕ ಯುವ ಹೃದಯಗಳಲ್ಲಿ ಸ್ಥಾನಪಡೆದರು. ಅಂತಹ ಖ್ಯಾತ ಸ್ಟಾರ್​​ಗಳ ಪುತ್ರಿ ಟ್ವಿಂಕಲ್ ಖನ್ನಾ ಕೂಡ ತಮ್ಮ ತಂದೆ-ತಾಯಿಯ ಮಾದರಿಯಲ್ಲೇ ‘ಬರ್ಸಾತ್’ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು.

    MORE
    GALLERIES

  • 49

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಟ್ವಿಂಕಲ್ ಖನ್ನಾ ಅವರ ಮೊದಲ ಚಿತ್ರ 'ಬರ್ಸಾತ್' ಉತ್ತಮ ಪ್ರದರ್ಶನ ನೀಡಿತು. ಇದರ ನಂತರ ಅವರು 'ಜಾನ್', 'ದಿಲ್ ತೇರಾ ದೀವಾನಾ', 'ಇಂಟರ್ನ್ಯಾಷನಲ್ ಕಿಲಾಡಿ', 'ಜುಲ್ಮಿ' ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದರು. ನಂತರ ಶಾರುಖ್ ಖಾನ್ ಜೊತೆ ‘ಬಾದ್ ಶಾ’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

    MORE
    GALLERIES

  • 59

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಈ ಚಿತ್ರವೂ ವಿಶೇಷವಾಗಿ ಏನೂ ಹೈಲೈಟ್ ಆಗಲಿಲ್ಲ. ಇದಾದ ನಂತರ 2000ನೇ ಇಸವಿಯಲ್ಲಿ ಟ್ವಿಂಕಲ್ ಅಭಿನಯದ ಇನ್ನೊಂದು ಸಿನಿಮಾ ಸೋಲು ಕಂಡಿತ್ತು. ಇದರ ನಂತರ ಸೈನ್ ಮಾಡಿದ ಚಿತ್ರಗಳನ್ನು ಪೂರ್ಣಗೊಳಿಸಿ ಟ್ವಿಂಕಲ್ ನಟನೆಯಿಂದ ಹೊರಗುಳಿದರು.

    MORE
    GALLERIES

  • 69

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಟ್ವಿಂಕಲ್ ಖನ್ನಾ ಅವರು ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿರಬಹುದು. ಆದರೆ ಇಂಟೀರಿಯರ್ ಡಿಸೈನರ್ ಮತ್ತು ಬರಹಗಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅವರು 'ಮಿಸೆಸ್ ಫನ್ನಿಬೋನ್ಸ್' ಬರಹಗಾರರಾಗಿ ಬಹಳ ಪ್ರಸಿದ್ಧರಾದರು. ಅವರು ಅನೇಕ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.

    MORE
    GALLERIES

  • 79

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಅಷ್ಟೇ ಅಲ್ಲ 2010ರಲ್ಲಿ ನಿರ್ಮಾಪಕಿಯೂ ಆದರು. ತನ್ನ ಪತಿ ಅಕ್ಷಯ್ ಕುಮಾರ್ ಜೊತೆಗೂಡಿ 'ತೀಸ್ಮಾರ್ ಖಾನ್', 'ಧನ್ಯವಾದ್', 'ಪಟಿಯಾಲ ಹೌಸ್', 'ಪ್ಯಾಡ್‌ಮ್ಯಾನ್' ಮುಂತಾದ ಚಿತ್ರಗಳಿಗೆ ನಿರ್ಮಾಪಕಿಯಾಗಿ ಕೆಲಸ ಮಾಡಿದರು.

    MORE
    GALLERIES

  • 89

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಟ್ವಿಂಕಲ್‌ಗೆ ಹಣದ ಕೊರತೆ ಇಲ್ಲ. ನಟನೆ ಬಿಟ್ಟರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ತಂದೆ ರಾಜೇಶ್ ಖನ್ನಾ ತಮ್ಮ ಇಬ್ಬರು ಪುತ್ರಿಯರಾದ ಟ್ವಿಂಕಲ್ ಖನ್ನಾ ಮತ್ತು ರಿಂಕಿ ಖನ್ನಾ ಅವರಿಗಾಗಿ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

    MORE
    GALLERIES

  • 99

    Twinkle Khanna: ಬಾಲಿವುಡ್​ ಸೂಪರ್​​ಸ್ಟಾರ್ ಮಗಳು ಮಹಾಫ್ಲಾಪ್! ಟ್ವಿಂಕಲ್ ಮೂವಿ ವರ್ಕೌಟ್ ಆಗಲೇ ಇಲ್ಲ

    ಟ್ವಿಂಕಲ್ ಖನ್ನಾ ನಟನೆಯಿಂದ ದೂರವಿರಬಹುದು ಆದರೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಹೊಸ ಹಳೆಯ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

    MORE
    GALLERIES