Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

Mahabharata-Rajamouli: ಇತ್ತೀಚೆಗಷ್ಟೇ ಮಹಾಭಾರತ ಸಿನಿಮಾದ ಮಾಡುವ ಕನಸಿನ ಬಗ್ಗೆ ರಾಜಮೌಳಿ ಹೇಳಿರುವ ಕೆಲವು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 10 ಭಾಗಗಳ ಅದ್ಧೂರಿ ರೇಂಜ್​ನಲ್ಲಿ ಈ ಸಿನಿಮಾವನ್ನು ಪ್ಲಾನ್ ಮಾಡಲಿದ್ದೇವೆ ಎಂದಿದ್ದಾರೆ.

First published:

  • 19

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ದೊಡ್ಡ ರೇಂಜ್ ಸಿನಿಮಾ ಕನಸು ಕಂಡಿದ್ದಾರೆ ನಿರ್ದೇಶಕ ರಾಜಮೌಳಿ, ಬಾಹುಬಲಿ ಚಿತ್ರದ ಮೂಲಕ ಸ್ಟಾರ್ ಡೈರೆಕ್ಟರ್ ಆಗಿ ರಾಜಮೌಳಿ ಮಿಂಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಹಾಭಾರತ ಸಿನಿಮಾದ ಬಗ್ಗೆ ಹೇಳಿರುವ ಕೆಲ ವಿಷಯಗಳು ವೈರಲ್ ಆಗುತ್ತಿವೆ.

    MORE
    GALLERIES

  • 29

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಮಹಾಭಾರತ ಸಿನಿಮಾ ಮಾಡುವ ಗುರಿ ಇಟ್ಟುಕೊಂಡಿರುವ ರಾಜಮೌಳಿ, ಇತ್ತೀಚೆಗಷ್ಟೇ ಅವರು ಫ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಬಗ್ಗೆ ಮಾತಾಡಿದ್ದಾರೆ. ಮಹಾಭಾರತ ಸಿನಿಮಾ ಮಾಡಬೇಕಾದರೆ ಅದು 10 ಭಾಗ ಅಥವಾ ಅದಕ್ಕಿಂತ ಹೆಚ್ಚು ಆಗಬಹುದು ಎಂದಿದ್ದಾರೆ.

    MORE
    GALLERIES

  • 39

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಹಲವು ವರ್ಷಗಳ ಹಿಂದೆಯೇ ಮಹಾಭಾರತ ಕಥೆ ಧಾರಾವಾಹಿ ರೂಪದಲ್ಲಿ ದೂರದರ್ಶನದಲ್ಲಿ ಹಲವಾರು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿತು. ಆದರೆ ಈ ಮಹಾಭಾರತವನ್ನು ಸಿನಿಮಾ ಮಾಡೋದು ನನ್ನ ಕನಸಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. ಈ ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರಲು 10 ಭಾಗಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 49

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಮಹಾಭಾರತ ಬಹಳ ದೊಡ್ಡ ಕಥೆ ಎಂದು ರಾಜಮೌಳಿ ಹೇಳಿದ್ದಾರೆ. ಇದೊಂದು ಬೃಹತ್ ಯೋಜನೆ. ಭಾರತೀಯ ಕಥೆಗಳನ್ನು ಜಗತ್ತಿಗೆ ಹೇಳಬೇಕು ಎನ್ನುವ ಆಸೆಯಿದೆ ಎಂದು ರಾಜಮೌಳಿ ಹೇಳಿದರು. ಆದರೆ ಆ ಮಹಾಸಾಗರವನ್ನು ಪ್ರವೇಶಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೂ ಮೊದಲು ಇನ್ನೂ ನಾಲ್ಕೈದು ಚಿತ್ರಗಳನ್ನು ಮಾಡುತ್ತೇವೆ ಎಂದು ಹೇಳಿದರು.

    MORE
    GALLERIES

  • 59

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಇತ್ತೀಚೆಗಷ್ಟೇ ರಾಜಮೌಳಿ, RRR ಸಿನಿಮಾದ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ ಆಸ್ಕರ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಇಂತಹ ದಿಗ್ಗಜ ನಿರ್ದೇಶಕ ಮಹಾಭಾರತದ ದೊಡ್ಡ ಸಿನಿಮಾ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

    MORE
    GALLERIES

  • 69

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ವಿಜಯೇಂದ್ರ ಪ್ರಸಾದ್, ಭಾರತೀಯ ಚಿತ್ರರಂಗದ ಟಾಪ್ ಬರಹಗಾರರಲ್ಲಿ ಒಬ್ಬರು. ಅವರ ಮಗ ರಾಜಮೌಳಿ ಅವರ ಚಲನಚಿತ್ರಗಳಿಗೂ ಅವರೆ ಸ್ಕ್ರಿಪ್ಟ್ ಬರೆಯುತ್ತಾರೆ. ‘ಬಾಹುಬಲಿ’ಯಂತಹ ಅದ್ಧೂರಿ ಸಿನಿಮಾಗೆ ಕಥೆ ನೀಡಿರುವ ಅವರು ಸದ್ಯ ಮಹೇಶ್ ಬಾಬು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

    MORE
    GALLERIES

  • 79

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ರಾಜಮೌಳಿ ಅವರು ಕಾಡಿನ ಬಗ್ಗೆ ಸಾಹಸ ಚಿತ್ರ ಮಾಡಬೇಕೆಂದು ಬಹಳ ದಿನಗಳಿಂದ ಬಯಸಿದ್ದರು ಆದರೆ ಅದು ಸಾಧ್ಯವಾಗಿರಲಿಲ್ಲ ಎಂದು ಜಕ್ಕಣ್ಣ ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ದರು. ಈಗ ಮಹೇಶ್ ಬಾಬು ಜೊತೆ ಆ ಜಾನರ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ಮಹೇಶ್ ಬಾಬು ಅತ್ಯುತ್ತಮ ಆಯ್ಕೆ ಎಂದಿದ್ದಾರೆ.

    MORE
    GALLERIES

  • 89

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಮಹೇಶ್-ರಾಜಮೌಳಿ ಕ್ರೇಜಿ ಕಾಂಬೋ ಆಗಿರುವ ಈ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಮಹೇಶ್ ಬಾಬು ಈಗಾಗಲೇ ರಾಜಮೌಳಿ ಅವರ ಚಿತ್ರಕ್ಕಾಗಿ ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಎಸ್ಎಸ್ಎಂಬಿ 29 ಎಂಬ ವರ್ಕಿಂಗ್ ಶೀರ್ಷಿಕೆಯೊಂದಿಗೆ ಚಿತ್ರ ನಿರ್ಮಾಣವಾಗುತ್ತಿದೆ.

    MORE
    GALLERIES

  • 99

    Rajamouli: 10 ಪಾರ್ಟ್​ಗಳಲ್ಲಿ ಮಹಾಭಾರತ ನಿರ್ಮಾಣ! ಇದಪ್ಪಾ ರಾಜಮೌಳಿ ಅಂದ್ರೆ ಎಂದ ನೆಟ್ಟಿಗರು

    ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಹಿರಿಯ ನಿರ್ಮಾಪಕ ಕೆಎಲ್ ನಾರಾಯಣ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಇದು ಭಾರತೀಯ ಚಲನಚಿತ್ರದ ಇತಿಹಾಸದಲ್ಲಿ ಉಳಿಯುತ್ತದೆ. ಈ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಪೂರ್ಣ ಹಂತಕ್ಕೆ ಬಂದಿದೆ.

    MORE
    GALLERIES