Santhosh Ananddram: ಐಷಾರಾಮಿ ಕಾರು ಖರೀದಿಸಿದ ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ ರಾಮ್​

ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಗೂ ಕಿರುತೆರೆಯ ನಟ-ನಟಿಯರು ಐಷಾರಾಮಿ ಹಾಗೂ ದುಬಾರಿ ಕಾರುಗಳ ಖರೀದಿಗೆ ಮುಂದಾಗಿದ್ದಾರೆ. ಕಿರುತೆರೆ ಕಲಾವಿದರಾದ ಮೇಘಾ ಶೆಟ್ಟಿ, ಶೈನ್ ಶೆಟ್ಟಿ ದುಬಾರಿ ಕಾರು ಖರೀದಿಸಿದ್ದು ಗೊತ್ತೇ ಇದೆ. ಇನ್ನು ರಕ್ಷಿತ್ ಶೆಟ್ಟಿ ಸಹ ಹೊಸ ಕಾರು ಖರೀದಿ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರು ಐಷಾರಾಮಿ ಕಾರನ್ನು ಖರೀದಿಸಿರುವ ಖುಷಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಸಂತೋಷ್ ಆನಂದ್​ ರಾಮ್​ ಇನ್​​ಸ್ಟಾಗ್ರಾಂ ಖಾತೆ)

First published: