ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಿ ಅಭಿನಯಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಎರಡನೇ ಪೋಸ್ಟರ್ ಈಗ ರಿಲೀಸ್ ಮಾಡಿದ್ದಾರೆ.
2/ 8
ಈ ಸಿನಿಮಾದಲ್ಲಿ ರಾಜ್. ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸಿರಿ ರವಿಕುಮಾರ್ ಅವರು ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಸಿನಿಮಾವನ್ನು ನಟಿ ರಮ್ಯಾ ಅವರು ನಿರ್ಮಿಸುತ್ತಿದ್ದಾರೆ.
3/ 8
ರಮ್ಯಾ ಹಾಗೂ ರಾಜ್. ಬಿ. ಶೆಟ್ಟಿ ಈ ಸಿನಿಮಾದಲ್ಲಿ ನಟಿಸುವುದೆಂದು ಹೇಳಲಾಗುಇತ್ತು. ಆದರೆ ಆ ನಂತರ ರಮ್ಯಾ ಅವ್ರು ಸಿನಿಮಾದಿಂದ ಹೊರಬಂದಿದ್ದು ಆ ಸ್ಥಾನಕ್ಕೆ ಸಿರಿ ರವಿಕುಮಾರ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.
4/ 8
ಪ್ರೇರಣಾ ಲುಕ್ನಲ್ಲಿ ಸಿರಿ ರವಿಕುಮಾರ್ ಅವರು ನಟಿಸಿದ್ದು ಅವರ ಫಸ್ಟ್ ಲುಕ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಕಾಡು ದಾರಿಯಲ್ಲಿ ನಡೆದು ಬರುತ್ತಿರುವ ಸಿರಿ ಅವರ ಫೋಟೋ ಸುಂದರವಾಗಿ ಮೂಡಿ ಬಂದಿತ್ತು.
5/ 8
ಸುಂದರವಾದ ಹಿನ್ನೆಲೆಯಲ್ಲಿ ಎತ್ತರದ ಪಗ್ರದೇಶದಲ್ಲಿ ವಿಂಟರ್ ಟೋಪಿ ಹಾಗೂ ಜಾಕೆಟ್ ಧರಿಸಿ ಕೈಯಲ್ಲಿ ಕಪ್ ಹಿಡಿದು ಕುಳಿತ ರಾಜ್ ಬಿ. ಶೆಟ್ಟಿ ಪೋಸ್ಟರ್ ಸುಂದರವಾಗಿ ಮೂಡಿ ಬಂದಿದೆ.
6/ 8
ಮುಖ್ಯವಾಗಿ ರಾಜ್ ಬಿ ಶೆಟ್ಟಿ ಅವರು ಶೇರ್ ಮಾಡಿದ ಎರಡೂ ಪೋಸ್ಟರ್ಗಳಲ್ಲಿ ಪ್ರಕೃತಿ ಸೌಂದರ್ಯ ಅದ್ಭುತವಾಗಿ ಕಂಡುಬಂದಿದೆ.
7/ 8
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಸೆಕೆಂಡ್ ಪೋಸ್ಟರ್ ಕೂಡಾ ಸುಂದರವಾದ ದೃಶ್ಯ ಕಾವ್ಯದಂತೆ ಮೂಡಿ ಬಂದಿರುವುದು ವಿಶೇಷ. ಪೋಸ್ಟರ್ ನೋಡಿದರೆ ಈ ಸಿನಿಮಾದ ಲೊಕೇಷನ್ ಪಕ್ಕಾ ಪ್ರಮುಖ ಆಕರ್ಷಣೆಯಾಗಲಿದೆ ಎನ್ನುವುದರಲ್ಲಿ ನೋ ಡೌಟ್.
8/ 8
ಈ ಸಿನಿಮಾವನ್ನು ನಟಿ ರಮ್ಯಾ ತಮ್ಮ ಆ್ಯಪಲ್ಬಾಕ್ಸ್ ಸ್ಟುಡಿಯೋದಲ್ಲಿ ನಿರ್ಮಿಸುತ್ತಿದ್ದಾರೆ. ಇದು ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ.