Ragini Dwivedi: ಅಪ್ಪನಿಗೆ ರುಚಿಕರ ಖಾದ್ಯಗಳನ್ನು ಮಾಡಿ ಉಣಬಡಿಸುತ್ತಿರುವ ನಟಿ ರಾಗಿಣಿ ದ್ವಿವೇದಿ..!
ರಾಗಿಣಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ ನಂತರ ಇದೇ ಮೊದಲ ಸಲ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮನೆಯಲ್ಲಿ ಕುಟುಂಬದವರೊಂದಿಗೆ ಸದ್ಯ ಕಾಲ ಕಳೆಯುತ್ತಿರುವ ರಾಗಿಣಿ ಎಂದಿನಂತೆ ಮನೆಯಲ್ಲಿ ಇಷ್ಟದ ಹಾಗೂ ಹೊಸ ರುಚಿಯ ಖಾದ್ಯಗಳನ್ನು ಮಾಡುತ್ತಾ ಅಪ್ಪನಿಗೆ ಉಣಬಡಿಸುತ್ತಿದ್ದಾರೆ. ಮಗಳ ಕೈ ರುಚಿ ಸವಿಯುತ್ತಾ ರಾಗಿಣಿ ಅವರ ತಂದೆ ಸಹ ಖುಷಿಯಾಗಿದ್ದಾರೆ. (ಚಿತ್ರಗಳು ಕೃಪೆ: ರಾಗಿಣಿ ದ್ವಿವೇದಿ ಇನ್ಸ್ಟಾಗ್ರಾಂ ಖಾತೆ)