ನಟಿ ರಾಗಿಣಿ ದ್ವಿವೇದಿ ಅವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಪೆಷಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ನೀಲಿ ಬಣ್ಣದ ದಾವಣಿ ಹಾಗೂ ಕೇಸರಿ ಬಣ್ಣದ ಲಂಗದಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅದಕ್ಕೆ ಗ್ರ್ಯಾಂಡ್ ಜ್ಯುವೆಲ್ಸ್ ಕೂಡಾ ಧರಿಸಿದ್ದರು. ನಟಿ ಸ್ಟೈಲಿಷ್ ಆಗಿ ಮೇಕಪ್ ಮಾಡಿಕೊಂಡಿದ್ದು ಸಂಪ್ರದಾಯಿಕ ಶೈಲಿಯಲ್ಲಿ ರೆಡಿಯಾಗಿದ್ದರು. ಮುಡಿಯಲ್ಲಿ ಮಲ್ಲಿಗೆಯನ್ನೂ ಮುಡಿದಿದ್ದರು. ರಾಗಿಣಿ ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಆಗಾಗ ತಮ್ಮ ಫೋಟೋಗಳನ್ನೂ, ವಿಡಿಯೋಗಳನ್ನೂ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿರುತ್ತಾರೆ. ಇದೀಗ ನಟಿ ಸಂಕ್ರಾಂತಿ ಪ್ರಯುಕ್ತ ಹಬ್ಬದ ಫೋಟೋಗಳನ್ನು ಪೋಸ್ಟ್ ಮಾಡಿದ್ದುಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಇತ್ತೀಚಿನ ಸಂದರ್ಶನದಲ್ಲಿ ವಿವಾಹದ ಪ್ಲಾನ್ಸ್ ಬಗ್ಗೆ ಮಾತನಾಡಿದ್ದರು. ವಿವಾಹ, ಮಕ್ಕಳು, ಪರ್ಸನಲ್ ಲೈಫ್ ಬಗ್ಗೆ ಉತ್ತರಿಸಿದ್ದರು. ಸದ್ಯ ತಾನು ಸಿನಿಮಾ ಕೆರಿಯರ್ ಮೇಲೆ ಫೋಕಸ್ ಮಾಡಿದ್ದು ಮದುವೆ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಸಿನಿಮಾ ಲೈಫ್ನಲ್ಲಿ ಖುಷಿ ಇದೆ ಎಂದಿದ್ದಾರೆ. ಬಹಳಷ್ಟು ಜನರು ಮದುವೆಯಾಗುತ್ತಿದ್ದಾರೆ. ಅವರು ಪೋಷಕರಾಗುವುದನ್ನು ನೋಡಲು ಖುಷಿಯಾಗುತ್ತದೆ. ಅವರೆಲ್ಲರಿಗೂ ಶುಭಶಾಯಗಳು ಎಂದು ಹೇಳಿದ್ದಾರೆ. ರಾಗಿಣಿ ಅವರು ಸುಂದರವಾದ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಬಿಂದಿ ಇಟ್ಟು ಕುಂಕುಮ ಹಚ್ಚಿಕೊಂಡು ಮುದ್ದಾದ ನಗುವನ್ನು ಕೊಟ್ಟಿದ್ದಾರೆ. ನಟಿಯ ಫೋಟೋಗಳಿಗೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.