ಜೈಲಿನಿಂದ ಹೊರ ಬಂದ ನಂತರ ಸಖತ್ ಸಕ್ರಿಯವಾಗಿರುವ ನಟಿ ರಾಗಿಣಿ ಮಹಿಳಾ ದಿನದಂದು ತಮ್ಮದೇ ಆದ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ಅಲ್ಲೇ ಪೋಸ್ಟ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ನಿನ್ನೆ ಶಿವರಾತ್ರಿ ಹಬ್ಬದಂದು ಮಾಡಿದ ವಿಶೇಷ ಪೂಜೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಈ ನಟಿ. (ಚಿತ್ರಗಳು ಕೃಪೆ: ರಾಗಿಣಿ ದ್ವಿವೇದಿ ಇನ್ಸ್ಟಾಗ್ರಾಂ ಖಾತೆ)