Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

Raghava Lawrence: ಸಮಾಜಮುಖಿ ಕಾರ್ಯಗಳಿಗೆ ಫೇಮಸ್ ಆಗಿರುವ ರಾಘವ ಲಾರೆನ್ಸ್ ಅವರು ಇದೀಗ 150 ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ. ಅದನ್ನು ನೋಡಿ ಅಲ್ಲು ಅರ್ಜುನ್ ಏನಂದ್ರು ಗೊತ್ತಾ?

First published:

 • 18

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ತಮಿಳಿನ ಖ್ಯಾತ ನಟ, ಕಾಂಚನಾ ಸ್ಟಾರ್ ರಾಘವನ್ ಲಾರೆನ್ಸ್ ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಸಮಾಜಮುಖಿ ಕಾರ್ಯಗಳಿಂದಲೇ ಗುರುತಿಸಿಕೊಂಡಿದ್ದಾರೆ. ಅನಾಥ ಮಕ್ಕಳ ಏಳಿಗೆಗಾಗಿ ಅವರು ಸಾಕಷ್ಟು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ನಟ ಹೊಸದಾಗಿ ಮಾಡಿರುವ ಕೆಲಸ ಈಗ ಮೆಚ್ಚುಗೆಗೆ ಪಾತ್ರವಾಗಿದೆ.

  MORE
  GALLERIES

 • 28

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರಾಘವ ಅವರು ಇತ್ತೀಚೆಗೆ 150 ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ. ಅವರಿಗೆ ಶಿಕ್ಷಣವನ್ನು ಒದಗಿಸುವ ಭರವಸೆಯನ್ನು ಕೊಟ್ಟಿದ್ದಾರೆ. ನಟನ ಈ ಕೆಲಸ ನೆಟ್ಟಿಗರಿಷ್ಟೇ ಅಲ್ಲ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ಅವರಿಗೂ ಮೆಚ್ಚುಗೆಯಾಗಿದೆ. ಅಲ್ಲು ಅರ್ಜುನ್ ಕಮೆಂಟ್ ಮಾಡಿ ರೆಸ್ಪೆಕ್ಟ್ ಎಂದು ಬರೆದಿದ್ದಾರೆ.

  MORE
  GALLERIES

 • 38

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರಾಘವ ಲಾರೆನ್ಸ್ ಅವರು ಟ್ವಿಟರ್​​ನಲ್ಲಿ ಫೋಟೋ ಶೇರ್ ಮಾಡಿ ಒಂದಷ್ಟು ಮಕ್ಕಳ ಜೊತೆಗೆ ಪೋಸ್ ಕೊಟ್ಟಿದ್ದಾರೆ. ಸುಂದರವಾಗಿ ಸ್ಮೈಲ್ ಕೊಟ್ಟು ಅವರನ್ನು ದತ್ತು ಸ್ವೀಕರಿಸಿಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ.

  MORE
  GALLERIES

 • 48

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರುದ್ರನ್ ಆಡಿಯೋ ಲಾಂಚ್ ಸಮಾರಂಭದಲ್ಲಿ ಮಾತನಾಡಿದ ನಟ 150 ಮಕ್ಕಳನ್ನು ದತ್ತು ಸ್ವೀಕರಿಸುತ್ತಿರುವುದನ್ನು ನಿಮ್ಮೆಲ್ಲರೊಂದಿಗೆ ಶೇರ್ ಮಾಡಲು ಖುಷಿಯಾಗುತ್ತಿದೆ. ನಿಮ್ಮೆಲ್ಲರ ಬೆಂಬಲ ನನಗೆ ಬೇಕು ಎಂದು ಫೋಟೋ ಜೊತೆ ಕ್ಯಾಪ್ಶನ್ ಕೊಟ್ಟಿದ್ದಾರೆ.

  MORE
  GALLERIES

 • 58

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರಾಘವ ಲಾರೆನ್ಸ್ ಅವರು ಈಗಾಗಲೇ ಹಲವು ಬಾರಿ ತಾವು ಸಮಾಜಸೇವಕ, ಸಹೃದಯಿ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ನಟನ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಟ ತಮ್ಮ ಲಾರೆನ್ಸ್ ಚಾರಿಟೆಬಲ್ ಟ್ರಸ್ಟ್​ ಅಡಿಯಲ್ಲಿ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಮಕ್ಕಳು ಹಾಗೂ ಯುವಕರಿಗೆ ನೆರವಾಗಿದ್ದಾರೆ.

  MORE
  GALLERIES

 • 68

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರುದ್ರನ್ ಎಂಬ ಸಿನಿಮಾದ ಆಡಿಯೋ ಲಾಂಚ್ ಪಾರ್ಟಿಯಲ್ಲಿ ನಟ ಈ ವಿಚಾರವನ್ನು ಶೇರ್ ಮಾಡಿದ್ದಾರೆ. ತೆಲುಗು ಮಾತನಾಡುವ ಯಾವುದೇ ಮಗುವಿಗೆ ಶಾಲೆಗೆ ಹೋಗಲು ಕಷ್ಟವಾಗುತ್ತಿದ್ದರೆ, ಹಾರ್ಟ್ ಸರ್ಜರಿ ಬೇಕಾಗಿದ್ದರೆ ಲಾರೆನ್ಸ್ ಚಾರಿಟೆಬಲ್ ಟ್ರಸ್ಟ್​ ಅನ್ನು ಸಂಪರ್ಕಿಸಿ ಎಂದಿದ್ದಾರೆ.

  MORE
  GALLERIES

 • 78

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರಾಘವ ಲಾರೆನ್ಸ್ ಅವರು ನಿರ್ಮಾಪಕ ವಿಎ ದುರೈ ಅವರಿಗೆ ನೆರವಾಗಿದ್ದಾರೆ. ರಜನೀಕಾಂತ್ ಹಾಗೂ ಸೂರ್ಯ ನಂತರ ರಾಘವ ಅವರು ದುರೈ ಅವರಿಗೆ ಮೂರು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ದುರೈ ಅವರು ಸದ್ಯ ಅವರ ಕಾಳಜಿ ವಹಿಸಲು ಯಾರೂ ಇಲ್ಲದೆ ಸ್ನೇಹಿತರ ಮನೆಯಲ್ಲಿ ತಂಗಿದ್ದಾರೆ.

  MORE
  GALLERIES

 • 88

  Allu Arjun: 150 ಮಕ್ಕಳ ದತ್ತು ಪಡೆದ ಕಾಂಚನಾ ನಟ! ಪುಷ್ಪಾ ಸ್ಟಾರ್ ಏನಂದ್ರು ಗೊತ್ತಾ?

  ರಾಘವ ಅವರು ತಮ್ಮ ಮುಂದಿನ ಸಿನಿಮಾ ರುದ್ರನ್ ಬಿಡುಗಡೆ ಖುಷಿಯಲ್ಲಿದ್ದಾರೆ. ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಬೇಕಾಗಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಸ್ಟೇ ತಂಡ ಕಾರಣ ಸಿನಿಮಾದ ಅಧಿಕೃತ ಬಿಡುಗಡೆ ದಿನ ಇನ್ನಷ್ಟೇ ತಿಳಿಯಬೇಕಿದೆ.

  MORE
  GALLERIES