ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಸಾಲಿನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.
2/ 7
ಯಶ್ ಹಾಗೂ ರಾಧಿಕಾ ಕುಟುಂಬಕ್ಕೆ ಈಗಾಗಲೇ ಇಬ್ಬರು ಹೊಸ ಅತಿಥಿಗಳ ಸೇರ್ಪಡೆ ಕೂಡ ಆಗಿದೆ. ಹೀಗಿರುವಾಗ ಯಶ್ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
3/ 7
ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕಿರುತೆರೆಯಿಂದ ಹಿರಿತೆರೆಗೆ ಬಂದವರು. ನಂತರ ಇಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ಖ್ಯಾತಿ ಹೆಚ್ಚಿಸಿಕೊಂಡವರು. ಅವರ ಕಿರುತೆರೆಯ ದಿನಗಳು ಬೇರೆ ರೀತಿಯಲ್ಲೇ ಇತ್ತು ಎಂಬುದು ಯಶ್ ಮಾತು.
4/ 7
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಶ್ ಈ ಮಾತನ್ನು ಹೇಳಿದ್ದಾರೆ.
5/ 7
ಯಶ್ ಹಾಗೂ ರಾಧಿಕಾ ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು. ಆದರೆ, ಇಬ್ಬರಿಗೂ ಅಷ್ಟಾಗಿ ಪರಿಚಯ ಇರಲಿಲ್ಲ. ಯಶ್ ಕಡಿಮೆ ಮಾತನಾಡುತ್ತಿದ್ದಂತೆ. ಹೀಗಿಗಾಗಿ, ಯಶ್ಗೆ ತುಂಬಾನೇ ಒರಟು ಎಂದು ಭಾವಿಸಿದ್ದರಂತೆ
6/ 7
ನಂತರ ಇಬ್ಬರೂ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಆಗ ಯಶ್ ನಿಜವಾದ ಸ್ವಭಾವ ಏನು ಎಂಬುದು ರಾಧಿಕಾ ಪಂಡಿತ್ಗೆ ಗೊತ್ತಾಗಿತ್ತು. ನಂತರ ಇಬ್ಬರೂ ಪರಸ್ಪರ ಪ್ರೀತಿಸಿ ಒಬ್ಬರನ್ನೊಬ್ಬರು ಮದುವೆ ಆಗಿದ್ದರು.
7/ 7
ಕೊರೋನಾ ವೈರಸ್ ಇಂದಾ ಶೂಟಿಂಗ್ ನಿಂತಿತ್ತು. ಹೀಗಾಗಿ ಯಶ್ ಕುಟುಂಬದ ಜೊತೆ ಸಮಯ ಕಳೆದಿದ್ದರು.