KGF Star Yash: ರಾಧಿಕಾ-ಯಶ್ ಮಗಳ ಹೊಸಾ ಫೋಟೋ ನೋಡಿ, ಎಷ್ಟೊಂದು ಮುದ್ದು!
Yash Kids Photo: ರಾಧಿಕಾ ಪಂಡಿತ್ ಹಾಗು ಯಶ್ ಆಗಾಗಾ ಮುದ್ದಾದ ಮಕ್ಕಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಆ ಮುದ್ದು ಮಕ್ಕಳ ನಗು ಅಭಿಮಾನಿಗಳಿಗೆ ಒಂದು ರೀತಿಯ ರಿಲ್ಯಾಕ್ಸ್ ಭಾವನೆ ನೀಡುತ್ತದೆ. ಇದೀಗ ಆಯ್ರಾಳ ಸುಂದರ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಲೈಕ್ಗಳ ಮಳೆ ಸುರಿಸಿದ್ದಾರೆ.
ಮಕ್ಕಳಾದ ನಂತರ ಚಿತ್ರರಂಗದಿಂದ ದೂರವಿರುವ ರಾಧಿಕಾ ಪಂಡಿತ್ ತಮ್ಮ ಕಂದಮ್ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅವರ ಲಾಲನೆ, ಪಾಲನೆಗೆ ಹೆಚ್ಚು ಸಮಯ ಮೀಸಲಿಟ್ಟುರುವ ನಟಿ, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್.
2/ 8
ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಮೂಲಕ ಹವಾ ಕ್ರಿಯೇಟ್ ಮಾಡಿದ್ದರೆ, ಇನ್ನೊಂದೆಡೆ ಅವರ ಮುದ್ದು ಪುಟಾಣಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ.
3/ 8
ಹೌದು, ಐರಾ ಹಾಗೂ ಯಥರ್ವನಿಗೆ ಈಗಾಗಲೇ ಫ್ಯಾನ್ಗಳಿದ್ದು, ಅವರ ಹೆಸರಿನ ಫ್ಯಾನ್ ಪೇಜ್ಗಳು ಸಹ ಸಾಮಾಜಿಕ ಜಾಲಾತಾಣದಲ್ಲಿದೆ. ಅವರದ್ದೇ ಆದ ಅಭಿಮಾನಿ ಬಳಗವನ್ನು ಈ ಪುಟಾಣಿಗಳು ಹೊಂದಿವೆ.
4/ 8
ಅಲ್ಲದೇ ರಾಧಿಕಾ ಮತ್ತು ಯಶ್ ಕೂಡ ಮಕ್ಕಳ ಫೋಟೋ ಹಾಗೂ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ರಂಜಿಸುತ್ತಾರೆ. ಯಶ್ ಕೂಡ ಮಗಳು ಸಲಾಂ ರಾಕಿಭಾಯ್ ಹಾಡನ್ನು ಹೇಳುತ್ತಿರುವ ವಿಡಿಯೋ ಹಾಕಿದ್ದರು. ಅದು ಸಹ ವೈರಲ್ ಆಗಿದ್ದು.
5/ 8
ಇದೀಗ ರಾಧಿಕಾ ಪಂಡಿತ್ ಮಕ್ಕಳ ಮತ್ತೊಂದು ಫೋಟೋ ಹಾಕಿಕೊಂಡಿದ್ದು, ಈಗಾಗಲೇ ಆ ಫೋಟೋಗೆ ಬಹಳಷ್ಟು ಲೈಕ್ ಹಾಗೂ ಕಾಮೆಂಟ್ ಬಂದಿದೆ.
6/ 8
ನೀಲಿ ಬಣ್ಣದ ಬಟ್ಟೆ ಹಾಕಿರುವ ಆಯ್ರಾ ಹಾಗೂ ಯಥರ್ವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆಯ್ರಾ ಮುದ್ದಾದ ನಗುವಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
7/ 8
ಇನ್ನು ಫೋಟೋಗೆ ಮಂಡೇ ಬ್ಲ್ಯೂಸ್ ಎಂದು ಅಡಿ ಬರಹ ಕೊಟ್ಟಿದ್ದು, ಯಥರ್ವ್ ಮುಖ ಮುಚ್ಚಿಕೊಂಡಿರುವುದನ್ನ ನಾವು ಕಾಣಬಹುದಾಗಿದೆ.
8/ 8
ಏನೇ ಇರಲಿ ಈ ಮಕ್ಕಳ ಫೋಟೋ ಹಾಕಿದ ಕೆಲ ಕ್ಷಣಗಳಲ್ಲಿ ವೈರಲ್ ಆಗುತ್ತಿದ್ದು, ಇವರೆಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂಬುದು ತಿಳಿಯುತ್ತದೆ.