Radhika Pandit: ರಾಧಿಕಾಗೆ ಯಶ್ ಕೊಟ್ಟ ಮೊದಲ ಗಿಫ್ಟ್ ಏನ್ ಗೊತ್ತಾ? ಅಯ್ಯೋ ಇದೇನು ಹಿಂಗ್ ಕೊಡ್ತಾರಾ ಯಾರಾದ್ರು?
ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರದ್ದು ಲವ್ ಮ್ಯಾರೇಜ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಯಶ್ ಅವರು ರಾಧಿಕಾ ಅವರಿಗೆ ಮೊದಲ ಬಾರಿ ಕೊಟ್ಟ ಗಿಫ್ಟ್ ಏನು ಗೊತ್ತಾ?
1/ 7
ರಾಧಿಕಾ ಪಂಡಿತ್ ಹಾಗೂ ಯಶ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಸ್ಯಾಂಡಲ್ವುಡ್ನ ರಾಮಾಚಾರಿ ಜೋಡಿ ನಿಜ ಜೀವನದಲ್ಲಿಯೂ ಕ್ಯೂಟ್.
2/ 7
ಸ್ಯಾಂಡಲ್ವುಡ್ನ ಮಾದರಿ ಜೋಡಿಗಳಲ್ಲಿ ಒಬ್ಬರಾಗಿರೋ ಈ ಸುಂದರ ಜೋಡಿ ಕುರಿತು ಬಹಳಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ. ಅದನ್ನು ಫ್ಯಾನ್ಸ್ ಕೂಡಾ ಕುತೂಹಲದಿಂದ ತಿಳಿದುಕೊಳ್ಳುತ್ತಾರೆ.
3/ 7
ನಟಿ ರಾಧಿಕಾ ತಮ್ಮ ಬರ್ತ್ಡೇ ಸಂದರ್ಭ ಆಸ್ಕ್ ರಾಧಿಕಾ ಸೆಷನ್ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.
4/ 7
ಈ ಸೆಷನ್ನಲ್ಲಿ ಅಭಿಮಾನಿಯೊಬ್ಬರು ಸ್ಪೆಷಲ್ ಪ್ರಶ್ನೆ ಕೇಳಿದ್ದಾರೆ. ಯಶ್ ಅವರಿಂದ ನಿಮಗೆ ಸಿಕ್ಕಿದ ಮೊದಲ ಗಿಫ್ಟ್ ಏನು ಎಂದು ಅಭಿಮಾನಿ ಪ್ರಶ್ನಿಸಿದ್ದಾರೆ.
5/ 7
ಇದಕ್ಕೆ ಉತ್ತರಿಸಿದ ನಟಿ ತುಂಬ ಪ್ರೀತಿ ತುಂಬಿದ ಫ್ರೆಶ್ ಸೊಪ್ಪಿನ ಕಟ್ಟು ಎಂದಿದ್ದಾರೆ. ಅದರೊಂದಿಗೆ ಥ್ರೋ ಭ್ಯಾಕ್ ಫೋಟೋ ಕೂಡಾ ಶೇರ್ ಮಾಡಿದ್ದಾರೆ.
6/ 7
ರಾಧಿಕಾ ಪಂಡಿತ್ ಅವರು 39ನೇ ವರ್ಷದ ಬರ್ತ್ಡೇ ಆಚರಿಸಿದ್ದು ನಟಿ ಈ ಬರ್ತ್ಡೇ ದಿನ ಮನೆಯಲ್ಲಿ ಇರುವುದಿಲ್ಲ ಎಂದಿದ್ದರು. ಆದರೆ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು.
7/ 7
ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ 2 ವರ್ಷ ದೊಡ್ಡವರು. ಇವರಿಬ್ಬರೂ ಕಿರುತೆರೆಯಲ್ಲಿಯೂ ಒಟ್ಟಿಗೆ ನಟಿಸಿ ಒಟ್ಟಿಗೆ ಸಿನಿಮಾ ರಂಗದಲ್ಲಿಯೂ ಮಿಂಚಿದ್ದಾರೆ.
First published: