Yash-Radhika: ಸಂಬಂಧಿಕರ ಮದುವೆಯಲ್ಲಿ ‘ರಾಕಿ ಭಾಯ್’, ಮಕ್ಕಳ ಜೊತೆ ರಾಧಿಕಾ ಮಿಂಚಿಂಗ್
ಕೆಜಿಎಫ್ 2 (KGF) ಸಿನಿಮಾದಲ್ಲಿ ಬ್ಯುಸಿಯಾಗಿರೋ ಸ್ಯಾಂಡಲ್ವುಡ್ ನಟ ಯಶ್ (Yash) ಬಹುದಿನಗಳ ಬಳಿಕ ಫ್ಯಾಮಿಲಿ (Family) ಜೊತೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಧಿಕಾ (Radhika) ತವರು ಮನೆಯ ಸಂಬಂಧಿಕರ ಮದುವೆಗೆ ಮಕ್ಕಳ (Children) ಸಮೇತ ಯಶ್ ದಂಪತಿ ಹೋಗಿದ್ರು. ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ತಾರಾ ಜೋಡಿ ಭಾಗಿಯಾಗಿದ್ರು. ಈ ಫೋಟೋಗಳನ್ನು ರಾಧಿಕಾ ಪಂಡಿತ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತಾರಾ ದಂಪತಿ ಯಶ್, ಹಾಗೂ ರಾಧಿಕಾ ತಮ್ಮ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ರನ್ನು ಮದುವೆಗೆ ಕರೆದುಕೊಂಡು ಬಂದಿದ್ರು. ರಾಧಿಕಾ ತವರು ಮನೆ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ರು.
2/ 8
ನಟಿ ರಾಧಿಕಾ ಪಂಡಿತ್ ಹಳದಿ ಬಣ್ಣದ ಲೆಹಂಗಾಯಲ್ಲಿ ತುಂಬಾ ಸಖತ್ ಆಗಿ ಕಾಣ್ತಿದ್ರು. ಇನ್ನು ಯಶ್ ಕೂಡ ಕಪ್ಪು ಬಣ್ಣದ ಕುರ್ತಾದಲ್ಲಿ ಮಿಂಚಿದ್ರು. ಆಯ್ರಾ ಹಾಗೂ ಯಥರ್ವ್ ಸಹ ಮುದ್ದು ಮುದ್ದಾಗಿ ಕಾಣ್ತಿದ್ದಾರೆ.
3/ 8
ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಫೋಟೋಗಳನ್ನು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳೊಂದಿಗೆ ಹಾಗೂ ಫ್ಯಾಮಿಲಿ ಜೊತೆ ತೆಗೆದುಕೊಂಡ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.
4/ 8
ರಾಧಿಕ ತಮ್ಮ ಕುಟುಂಬದ ಫೋಟೋಗಳನ್ನು ಶೇರ್ ಮಾಡ್ತಿದ್ದಂತೆ ಲೈಕ್ಗಳ ಸುರಿಮಳೆಯಾಗಿದೆ. 2 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಲೈಕ್ ಬಂದಿದ್ದು, ಫೋಟೋಗಳು ಸಖತ್ ವೈರಲ್ ಆಗ್ತಿವೆ.
5/ 8
ಜೊತೆಗೆ, ಬಹಳ ದಿನಗಳ ಬಳಿಕ ನನ್ನ ಚಿಕ್ಕಮ್ಮಂದಿರನ್ನ ಕಸಿನ್ ಮದುವೆಯಲ್ಲಿ ಭೇಟಿಯಾದೆ. ಸಂತಸದ ಕ್ಷಣಗಳನ್ನ ನಾವು ಕಳೆದ್ವಿ ಅಂತ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
6/ 8
ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ರಾಧಿಕಾ, ಯಶ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಅವರ ಮಕ್ಕಳಾದ ಆಯ್ರಾ, ಯಥರ್ವ್ಗೂ ಫಾನ್ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಆಯ್ರಾ ಅಭಿಮಾನಿಗಳ ಬಗ್ಗೆ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಯಶ್ ಮಾತಾಡಿದ್ರು
7/ 8
2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನ ರಾಧಿಕಾ ಪಂಡಿತ್ ಮದುವೆಯಾದರು. ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
8/ 8
ಸ್ಯಾಂಡಲ್ವುಡ್ಗೆ ಒಟ್ಟಿಗೆ ಕಾಲಿಟ್ಟ ಈ ಜೋಡಿ, ಒಟ್ಟಿಗೆ ಕೆಲ ಚಿತ್ರಗಳನ್ನು ಮಾಡಿದ್ದಾರೆ. ಮೊಗ್ಗಿನ ಮನಸ್ಸು ಇಬ್ಬರ ಮೊದಲ ಚಿತ್ರವಾಗಿದೆ. ಬಳಿಕ ರಾಮಾಚಾರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಇಬ್ಬರು ಅಭಿನಯಿಸಿದ್ದಾರೆ