ಯುವರಾಜ್ ವಂಚನೆ ಪ್ರಕರಣ: ಸಿಸಿಬಿ ವಿಚಾರಣೆ ನಂತರ ರಾಧಿಕಾ ಕುಮಾರಸ್ವಾಮಿ ಹೇಳಿದ್ದು ಹೀಗೆ..!
Radhika Kumaraswamy: ರಾಜಕೀಯ ನಾಯಕರ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಆರೋಪದ ಮೇರೆಗೆ ಸಿಸಿಬಿ ಪೊಲೀಸರ ವಶದಲ್ಲಿರುವ ಯುವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೆ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದರು. ಸುದ್ದಿಗೋಷ್ಠಿ ನಡೆದ ಬೆನ್ನಲ್ಲೇ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ಪೊಲೀಸು ವಿಚಾರಣೆ ನಡೆಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಪೊಲೀಸರಿಗೆ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಕೋಟಿ ಕೋಟಿ ವಂಚಿಸಿರುವ ಆರೋಪದ ಮೇಲೆ ಸಿಸಿಬಿ ಪೊಲೀಸರ ಅಥಿತಿಯಾಗಿರುವ ಯುವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಿದ್ದರು.
2/ 7
ನಿನ್ನೆಯಷ್ಟೆ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ಮಾಡಿ, ಯುವರಾಜ್ ಅವರು 18 ವರ್ಷಗಳಿಂದ ತಮ್ಮ ಕುಟುಂಬಕ್ಕೆ ಪರಿಚಿತರು. ಅವರೊಂದಿಗೆ ಸಿನಿಮಾ ಹೊತಾಗಿ ಮತ್ತಾವುದೇ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
3/ 7
ಸುದ್ದಿಗೋಷ್ಠಿಯಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಇಂದು ರಾಧಿಕಾ ಅವರನ್ನು ವಿಚರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾದ ರಾಧಿಕಾ ಅವರು ಯುವರಾಜ್ ಕುರಿತಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
4/ 7
ಯುವರಾಜ್ ನೀಡಿರುವ ಹೇಳಿಕೆ ಹಾಗೂ ರಾಧಿಕಾ ಕೊಟ್ಟಿರುವ ಮಾಹಿತಿಗೆ ಹೋಲಿಕೆ ಆಗದ ಕಾರಣದಿಂದ ಇಬ್ಬರನ್ನೂ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಾಯಿತಂತೆ.
5/ 7
ವಿಚಾರಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಧಿಕಾ ಸಿಸಿಬಿ ಪೊಲೀಸರು ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
6/ 7
ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್ ಅವರು ನೀಡಿರುವ ಹೇಳಿಕೆಯಲ್ಲಿ ಗೊಂದಲ ಇರುವ ಕಾರಣದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಗೆ ಇನ್ನೂ ಟೆನ್ಷನ್ ತಪ್ಪಿಲ್ಲ ಎನ್ನಲಾಗುತ್ತಿದೆ.
7/ 7
ಆದರೆ ರಾಧಿಕಾ ಮಾತ್ರ ಯುವರಾಜ್ ಅವರೊಂದಿಗೆ ಸಿನಿಮಾ ಹೊರತಾಗಿ ಮತ್ತಾವುದೇ ವ್ಯವಹಾರ ಇಲ್ಲ ಎನ್ನುತ್ತಿದ್ದಾರೆ.
First published:
17