ಮಗಳನ್ನು ನೆಟ್ಟಿಗರಿಗೆ ಪರಿಚಯಿಸಿದ ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ರಾಧಾ ಕಲ್ಯಾಣದಲ್ಲಿ (Kannada Serial Radha Kalyana ) ವಿಶಾಖಾ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದ ನಟಿ ಚೈತ್ರಾ ರೈ (Chaithra Rai). ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ತಮ್ಮ ಮಗಳ ಫೋಟೋವನ್ನು ಇದೇ ಮೊದಲ ಸಲ ಪೋಸ್ಟ್ ಮಾಡಿದ್ದು, ಜೊತೆಗೆ ಮಗುವಿನ ಹೆಸರನ್ನೂ ರಿವೀಲ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಚೈತ್ರಾ ರೈ ಇನ್ಸ್ಟಾಗ್ರಾಂ ಖಾತೆ)
ಕಿರುತೆರೆಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಪರಿಚಯವಾದ ನಟಿ ಚೈತ್ರಾ ರೈ. ಕರಾವಳಿಯ ಈ ಬೆಡಗಿ ರಾಧಾ ಕಲ್ಯಾಣ ಧಾರಾವಾಹಿಯ ಮೂಲಕ ಖ್ಯಾತಿಗೆ ಬಂದರು. ಕನ್ನಡ ಧಾರಾವಾಹಿಯ ಜೊತೆಗೆ ತೆಲುಗಿನಲ್ಲೂ ಸಹ ಸಕ್ರಿಯವಾಗಿದ್ದರು ಈ ನಟಿ.
2/ 6
ಇತ್ತೀಚೆಗಷ್ಟೆ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿದ್ದು, ಅದರ ಚಿತ್ರಗಳನ್ನು ಚೈತ್ರಾ ರೈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಬೇಬಿ ಬಂಪ್ ಚಿತ್ರಗಳನ್ನೂ ಸಹ ಶೇರ್ ಮಾಡಿದ್ದರು.
3/ 6
ತುಂಬು ಗರ್ಭಿಣಿಯಾಗಿದ್ದ ಚೈತ್ರಾ ನಂತರದಲ್ಲಿ ತಮಗೆ ಹೆಣ್ಣು ಮಗುವಾಗಿದ್ದ ವಿಷಯವನ್ನೂ ಸಹ ನೆಟ್ಟಿಗರ ಜೊತೆ ಹಂಚಿಕೊಂಡಿದ್ದರು. ಆಗಸ್ಟ್ 6ರಂದು ಚೈತ್ರಾ ಹಾಗೂ ಪ್ರಸನ್ನ ಅವರ ಜೀವನಕ್ಕೆ ಈ ಮಗುವಿನ ಎಂಟ್ರಿ ಆಯಿತು.
4/ 6
ಮಗಳಿಗೆ ನಿಷ್ಕಾ ಶೆಟ್ಟಿ ಎಂದು ಹೆಸರಿಟ್ಟಿದ್ದು, ಮಗಳ ಹೆಸರನ್ನೂ ರಿವೀಲ್ ಮಾಡಿದ್ದಾರೆ. ಮಗಳು ಹಾಗೂ ಪತಿ ಪ್ರಸನ್ನ ಶೆಟ್ಟಿ ಅವರ ಜೊತೆಗಿನ ಕೆಲವು ಫೋಟೋಗಳನ್ನು ಮೊಲದ ಸಲ ಹಂಚಿಕೊಂಡಿದ್ದಾರೆ.
5/ 6
ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ವಿಶಾಖಾ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಅವರು, ಬೊಂಬೆಯಾಟಯ್ಯ, 'ಯುಗಾದಿ', 'ಬಣ್ಣದ ಬುಗುರಿ', 'ಕುಸುಮಾಂಜಲಿ', 'ನಾಗಮಣಿ', 'ಗೆಜ್ಜೆಪೂಜೆ', ''ಪೌರ್ಣಮಿ', ಮುಂತಾದ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದಾರೆ.
6/ 6
ಗರ್ಭಿಣಿಯಾಗುವ ಕೆಲ ಸಮಯದ ಮುಂಚೆಯೇ ಚೈತ್ರಾ ರೈ ಅವರು ಅಭಿನಯದಿಂದ ದೂರ ಉಳಿದರು. ನಂತರದಲ್ಲಿ ತಾವು ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಚೈತ್ರಾ ರೈ ಅವರು ಕಾಣಿಸಿಕೊಂಡ ಕೊನೆಯ ಧಾರಾವಾಹಿ ತೆಲುಗಿನ ಅತ್ತಾರಿಂಟಿಕಿ ದಾರೇದಿ.