ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ಟಾಲಿವುಡ್ನತ್ತ ಮುಖ ಮಾಡಿರುವುದು ಗೊತ್ತಿರುವ ವಿಷಯ.
2/ 36
ಈ ಹಿಂದೆ ಡಿಂಪಲ್ ಕ್ವೀನ್ ತೆಲುಗು ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಅದರೊಂದಿಗೆ...
3/ 36
ಬೋಯಪಾಟಿ ಶ್ರೀನು ಮತ್ತು ನಂದಮೂರಿ ಬಾಲಕೃಷ್ಣ ಕಾಂಬಿನೇಷನ್ನಲ್ಲಿ ಬರಲಿರುವ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ...ರಚಿತಾ ರಾಮ್ ನಟಿಸುತ್ತಿರುವ ತೆಲುಗು ಸಿನಿಮಾ ಹೆಸರು 'ಸೂಪರ್ ಮಚ್ಚಿ' . ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ಮೆಗಾ ಸ್ಟಾರ್ ಕುಟುಂಬದ ಕುಡಿ ಎಂಬುದು ವಿಶೇಷ.
4/ 36
ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ಕಲ್ಯಾಣ್ ದೇವ್ ನಟಿಸುತ್ತಿರುವ 'ಸೂಪರ್ ಮಚ್ಚಿ' ಮೂಲಕ ನಾಯಕಿಯಾಗಿ ಡಿಂಪಲ್ ಕ್ವೀನ್ ಟಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.
5/ 36
ಈ ಹಿಂದೆ 'ವಿಜೇತಾ' ಎಂಬ ಚಿತ್ರದಲ್ಲಿ ನಾಯಕನಾಗಿ ಕಲ್ಯಾಣ್ ದೇವ್ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದೇ ನಿರಾಸೆ ಮೂಡಿಸಿತ್ತು.
6/ 36
ಇದೀಗ 2ನೇ ಚಿತ್ರದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದು, ಸೂಪರ್ ಮಚ್ಚಿ ಮೂಲಕ ಚಿರಂಜೀವಿ ಅಳಿಯನಿಗೆ ಗೆಲುವಿನ ರುಚಿ ತೋರಿಸಲು ನಿರ್ದೇಶಕ ಪುಲಿ ವಾಸು ಟೊಂಕ ಕಟ್ಟಿ ನಿಂತಿದ್ದಾರೆ.
7/ 36
ಈ ಸಿನಿಮಾ ಪ್ರಗತಿಯಲ್ಲಿರುವಾಗಲೇ ಸ್ಯಾಂಡಲ್ವುಡ್ ಬೆಡಗಿಗೆ ಅತ್ತ ಕಾಲಿವುಡ್ನಿಂದಲೂ ಬುಲಾವ್ ಬಂದಿದೆ.
8/ 36
ಮೋಹಕ ನಗುವಿನ ಬುಲ್ ಬುಲ್ ಸುಂದರಿಗೆ ಕಾಲಿವುಡ್ನ ಖ್ಯಾತ ನಟ ವಿಶಾಲ್ ಭರ್ಜರಿ ಆಫರ್ ನೀಡಿದ್ದು, ತಮ್ಮ ಸಿನಿಮಾದಲ್ಲಿ ನಾಯಕಿಯಾಗಲು ಕೇಳಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
9/ 36
ಈ ಬಗ್ಗೆ ಈಗಾಗಲೇ ರಚಿತಾ ರಾಮ್ ಕೂಡ ಒಂದು ಸುತ್ತಿನ ಮಾತುಕತೆಯನ್ನು ಸಹ ಮುಗಿಸಿದ್ದಾರೆ.
10/ 36
ಮೂಲತಃ ಕನ್ನಡದವರಾದ ವಿಶಾಲ್, ರಾಕಿಂಗ್ ಸ್ಟಾರ್ ಯಶ್ ಅವರ ಆಪ್ತರಲ್ಲಿ ಒಬ್ಬರು. ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಕನ್ನಡ ನಟಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.
11/ 36
ರಚಿತಾ ರಾಮ್ ಆಪ್ತ ಮೂಲಗಳ ಪ್ರಕಾರ, ಡಿಂಪಲ್ ಕ್ವೀನ್ ಕಾಲಿವುಡ್ ಎಂಟ್ರಿ ಇನ್ನೂ ಕನ್ಫರ್ಮ್ ಆಗಿಲ್ಲ. ರಚಿತಾ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಟೈಟಲ್ನೊಂದಿಗೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸದೆ ಎಂದು ತಿಳಿಸಿದ್ದಾರೆ.
12/ 36
ಒಟ್ಟಿನಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟಿ ಎನಿಸಿಕೊಂಡಿರುವ ರಚಿತಾ ರಾಮ್, 2020 ಯಲ್ಲಿ ಟಾಲಿವುಡ್-ಕಾಲಿವುಡ್ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುವ ಮೂಲಕ ಶೀಘ್ರದಲ್ಲೇ ಬಹುಭಾಷಾ ನಟಿ ಎಂಬ ಪಟ್ಟವನ್ನು ಪಡೆಯಲಿದ್ದಾರೆ.