Rachita Ram: ಸೊಂಪಾದ ಕೂದಲು ಕಟ್ ಮಾಡಿದ್ರಾ ನಟಿ? ರಚಿತಾ ರಾಮ್ ಹೊಸ ಲುಕ್ ನೋಡಿ
ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ಹೊಸ ಮಿರರ್ ಸೆಲ್ಫೀ ಶೇರ್ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಸೊಂಪಾದ ಕೂದಲು ಕಟ್ ಮಾಡಿದ್ರಾ ನಟಿ?
1/ 7
ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟಿವ್ ಆಲ್ಲ. ಆದರೆ ಸಿನಿಮಾ ಹಾಗೂ ಪರ್ಸನಲ್ ವಿಚಾರಗಳನ್ನು ಕೆಲವೊಮ್ಮೆ ಶೇರ್ ಮಾಡಿಕೊಳ್ಳುತ್ತಾರೆ.
2/ 7
ರಚಿತಾ ರಾಮ್ ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕಿಂತ ಮಿರರ್ ಸೆಲ್ಫೀಗಳನ್ನು ಶೇರ್ ಮಾಡುವುದೇ ಹೆಚ್ಚು. ಭಾರೀ ಅಪರೂಪಕ್ಕೆ ಒಂದೆರಡು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ.
3/ 7
ನಟಿ ರಚಿತಾ ರಾಮ್ ಅವರು ಇತ್ತೀಚೆಗೆ ಮಿರರ್ ಸೆಲ್ಫೀ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ ಕೈಯಲ್ಲಿ ಕಪ್ ಹಿಡಿದು ಕಾಣಿಸಿಕೊಂಡಿದ್ದಾರೆ.
4/ 7
ಬ್ಲೂ ಟೀಶರ್ಟ್ ಧರಿಸಿರುವ ಫೋಟೋ ಶೇರ್ ಮಾಡಿದ ನಟಿ ಅದರೊಂದಿಗೆ ಕ್ಯಾಪ್ಶನ್ನಲ್ಲಿ ಬ್ಲೂ ಹಾರ್ಟ್ ಕೂಡಾ ಶೇರ್ ಮಾಡಿದ್ದಾರೆ. ಇದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
5/ 7
ನಟಿಯ ಈ ಫೋಟೋದಲ್ಲಿ ಅಭಿಮಾನಿಗಳು ಗಮನಿಸಿದ್ದು ಅವರ ಕೂದಲನ್ನು. ಸೊಂಪಾದ ಕೂದಲು ಕಟ್ ಮಾಡಿದ್ರಾ ರಚಿತಾ ರಾಮ್ ಎಂದು ಕನ್ಫ್ಯೂಸ್ ಆಗ್ತಿದ್ದಾರೆ ಅಭಿಮಾನಿಗಳು.
6/ 7
ನಟಿಯ ಫೋಟೋ ವೈರಲ್ ಆಗಿದ್ದು ಇದನ್ನು ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 288ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.
7/ 7
ಗುಳಿಕೆನ್ನೆಯ ನಟಿ ರಚಿತಾ ರಾಮ್ ಅವರ ಈ ಲುಕ್ ಅವರಿಗೆ ಇಷ್ಟವಾಗಿದೆ. ಬೋಲ್ಡ್ & ಜಾಲಿಯಾಗಿ ಕಾಣಿಸಿಕೊಂಡಿರುವ ನಟಿಯ ಸ್ಟೈಲ್ ಕೊಂಡಾಡುತ್ತಿದ್ದಾರೆ ಅಭಿಮಾನಿಗಳು.
First published: