Rachita Ram: ಮತ್ತೆ ಕೈಯಲ್ಲಿ ಸಿಗರೇಟ್ ಹಿಡಿದ ರಚಿತಾ ರಾಮ್: ನನ್ನ ಬಗ್ಗೆ ತಿಳಿದುಕೊಳ್ಳವ ಪ್ರಯತ್ನ ಬಿಡಿ ಎಂದ ನಟಿ..!
ರಚಿತಾ ರಾಮ್ ಅವರಿಗೆ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ನೆಚ್ಚಿನ ನಟಿಯನ್ನು ಬೋಲ್ಡ್ ಪಾತ್ರಗಳಲ್ಲಿ ನೋಡಲು ಬಯಸುವುದಿಲ್ಲ ಈ ಹಿಂದೆಯೂ ರಚಿತಾ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದೇ, ಟ್ರೋಲ್ಗೆ ಬಲಿಯಾಗಿದ್ದರು. ಈಗ ಮತ್ತೊಮ್ಮೆ ಈ ನಟಿ ರೌಡಿ ಬೇಬಿ ಅವತಾರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. (ಚಿತ್ರಗಳು ಕೃಪೆ: ರಚಿತಾ ರಾಮ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಸದಾ ಅಭಿಮಾನಿಗಳನ್ನು ರಂಜಿಸುವ ಲವರ್ ಗರ್ಲ್ ಪಾತ್ರಗಳಲ್ಲಿ ಮಿಂಚುವ ರಚಿತಾ ರಾಮ್ ಈ ಸಲ ಕೈಯಲ್ಲಿ ಸಿಗರೇಟ್ ಹಾಗೂ ಗನ್ ಹಿಡಿದು ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
2/ 12
ರಚಿತಾ ರಾಮ್ ದೀಪಾವಳಿ ಪ್ರಯುಕ್ತ ತಮ್ಮ ಈ ಹೊಸ ಲುಕ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಈಗ ಇದು ಚರ್ಚೆಗೀಡಾಗಿದೆ.
3/ 12
ಈ ಹಿಂದೆಯೂ ಏಕ್ ಲವ್ ಯಾ ಸಿನಿಮಾದಲ್ಲೂ ರಚಿತಾ ಸಿಗರೇಟ್ ಸೇದುವ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಮಂದಿ ಟೀಕಿಸಿದ್ದರು.
4/ 12
ಇದೇ ಕಾರಣಕ್ಕೆ ಇರಬೇಕು ಈ ಸಲ ರಚಿತಾ ರಾಮ್ ಟೀಕಿಸುವವರಿಗೆ ಮೊದಲೇ ಖಡಕ್ ಉತ್ತರ ಕೊಟ್ಟಿದ್ದಾರೆ.
5/ 12
ನಾನು ನಿಮಗೆ ಆಕ್ರಮಣಕಾರಿಯಾಗಿ ಅಥವಾ ನಿಮ್ಮ ಮನಸ್ಸಿಗೆ ನೋವುಮಾಡುವಂತೆ ಕಂಡರೆ, ನನ್ನ ಬಗ್ಗೆ ತಿಳಿಯುವ ನಿಮ್ಮ ಪ್ರಯತ್ನವನ್ನು ಕೈಬಿಡಿ ಎಂದಿದ್ದಾರೆ ರಚಿತಾ ರಾಮ್.
6/ 12
ಸದ್ಯ ರಚಿತಾ ಅವರ ಈ ಮಾಸ್ ಲುಕ್ ಕೆಲವರಿಗಂತೂ ತುಂಬಾ ಇಷ್ಟವಾಗುತ್ತಿದೆ.
7/ 12
ದೀಪಾವಳಿ ಹಬ್ಬದ ಪ್ರಯುಕ್ತ ರಚಿತಾ ತಮ್ಮ ಹೊಸ ಸಿನಿಮಾ ಪಂಕನ ಕಸ್ತೂರಿ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಮಯೂರ ರಾಘವೇಂದ್ರ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.