ಅಲ್ಲು ಅರ್ಜುನ್ ಅವರ ವೃತ್ತಿ ಜೀವನ ಆರಂಭವಾಗಿ 20 ವರ್ಷಗಳು ಕಳೆದಿವೆ. ಅವರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಮಧ್ಯದಲ್ಲಿ ಕಾರಣಾಂತರಗಳಿಂದ 12ಕ್ಕೂ ಹೆಚ್ಚು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರೆ. ಕೆಲವು ಕಥೆಗಳು ಇಷ್ಟವಾಗದ ಕಾರಣಕ್ಕೆ ನೋ ಎಂದರು. ಇನ್ನು ಕೆಲವು ಕಥೆಗಳು ಇಷ್ಟವಾದರೂ ಡೇಟ್ಸ್ ಸಿಗದೆ ಅನಿವಾರ್ಯವಾಗಿ ಕೈ ಬಿಡಬೇಕಾಯಿತು. ಹಾಗೆ ಅಲ್ಲು ಅರ್ಜುನ್ ಕೈಬಿಟ್ಟ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಅಲ್ಲು ಅರ್ಜುನ್ ಅವರನ್ನು ಇಂಡಸ್ಟ್ರಿಗೆ ಕರೆತರುವ ಯೋಚನೆಯಲ್ಲಿದ್ದಾಗ ತೇಜಾ ಕೆರಿಯರ್ ಉತ್ತುಂಗದಲ್ಲಿದ್ದರು. ಆ ವೇಳೆಗೆ ಅಲ್ಲು ಅರವಿಂದ್‌ಗೆ ಮಗನ ಜವಾಬ್ದಾರಿಯನ್ನು ತೇಜಾಗೆ ವಹಿಸಬೇಕು ಎಂದು ಅನಿಸಿತ್ತು. ಜಯಂ ಸಿನಿಮಾ ಬನ್ನಿ ಜೊತೆ ಮಾಡಲು ಬಯಸಿದ್ದರು. ಅನಿರೀಕ್ಷಿತ ಕಾರಣಗಳಿಂದ ಚಿತ್ರ ಸ್ಥಗಿತಗೊಂಡಿತ್ತು. ಇದೇ ಸಿನಿಮಾ ನಿತಿನ್ ವೃತ್ತಿ ಬದುಕಿಗೆ ಭದ್ರ ಬುನಾದಿ ಹಾಕಿತು.
ಸುಕುಮಾರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವಾಗ ಬೋಯಪತಿ ಶ್ರೀನು ಮೊದಲು ಭದ್ರ ಚಿತ್ರದ ಕಥೆಯನ್ನು ಅಲ್ಲು ಅರ್ಜುನ್ ಅವರಿಗೆ ಹೇಳಿದ್ದರು. ಆದರೆ ಅಲ್ಲು ಆರ್ಯ ಸಿನಿಮಾದಂತಹ ಫ್ರೆಶ್ ಲವ್ ಸ್ಟೋರಿ ಮಾಡುತ್ತಿರುವುದರಿಂದ ಇಂತಹ ಮಾಸ್ ಮಸಾಲಾ ಚಿತ್ರಗಳಿಂದ ದೂರ ಉಳಿಯಲು ನಿರ್ಧರಿಸಿದ್ದರು. ಹಾಗಾಗಿ ಭದ್ರ ಚಿತ್ರವನ್ನು ಅಲ್ಲು ಅರ್ಜುನ್ ಬಿಟ್ಟಿದ್ದಾರೆ.
ಯಾವುದೇ ಕಥೆ ಬರೆಯುವ ಮುನ್ನ ಸುಕುಮಾರ್ ಅಲ್ಲು ಅರ್ಜುನ್ಗೆ ಕಥೆ ಹೇಳ್ತಾರೆ. 100% ಲವ್ ಸಿನಿಮಾದ ಕಥೆಯನ್ನೂ ಅವರು ಹೇಳಿದ್ದರು. ಆದರೆ ಕೆಲವು ಕಾರಣಗಳಿಂದ ಅಲ್ಲು ಅರ್ಜುನ್ಗೆ ಕಥೆ ಓಕೆ ಆಗಲಿಲ್ಲ. ಈ ಸಾಫ್ಟ್ ಲವ್ ಸ್ಟೋರಿಗಳು ತನಗೆ ದೊಡ್ಡ ವಿಷಯವಲ್ಲ ಎಂದೂ ಸುಕುಮಾರ್ಗೆ ಹೇಳಿದ್ದರು. ನಾಗ ಚೈತನ್ಯ ಹಾಗೂ ತಮನ್ನಾ ಕಾಂಬಿನೇಷನ್ನಲ್ಲಿ ಬಂದ ಸಿನಿಮಾ ನಂತರ ಹಿಟ್ ಆಯಿತು.
ವಿಜಯ್ ದೇವರಕೊಂಡ ಸೂಪರ್‌ಸ್ಟಾರ್‌ಗೆ ಪಟ್ಟಕ್ಕೆ ಏರುವಲ್ಲಿ ಅಲ್ಲು ಅರ್ಜುನ್ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಅರ್ಜುನ್ ರೆಡ್ಡಿ ಕಥೆಯನ್ನು ತಿರಸ್ಕರಿಸಿ ವಿಜಯ್ ದೇವರಕೊಂಡಗೆ ಜೀವ ತುಂಬಿದ ಅಲ್ಲು ಅರ್ಜುನ್ ಹಿಟ್ ಸಿನಿಮಾ ಗೀತ ಗೋವಿಂದಂ ಕಥೆಯನ್ನೂ ರಿಜೆಕ್ಟ್ ಮಾಡಿದ್ದರು. ಚಿತ್ರದಲ್ಲಿ ಹೀರೋಯಿನ್ ಪ್ರಾಬಲ್ಯವಿರುವುದರಿಂದ ಸ್ಟಾರ್ ಇಮೇಜ್ ಧಕ್ಕೆಯಾಗುವುದಾಗಿ ಈ ಕಥೆ ನಟ ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ.
ತಮಿಳಿನಲ್ಲಿ ಸಂಚಲನ ಮೂಡಿಸಿದ್ದ 96 ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲು ಯೋಚಿಸಿದಾಗ, ಅಲ್ಲು ಅರ್ಜುನ್ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂದು ದಿಲ್ ರಾಜು ಭಾವಿಸಿದ್ದರು. ಆದರೆ ಇಂತಹ ಸಾಫ್ಟ್ ಲವ್ ಸ್ಟೋರಿ ಆಗಲ್ಲ ಎಂದು ಅಲ್ಲು ಅರ್ಜುನ್ ನಯವಾಗಿ ತಿರಸ್ಕರಿಸಿದ್ದರು. ನಂತರ ಇದೇ ಸಿನಿಮಾವನ್ನು ಶರ್ವಾನಂದ್ ಮತ್ತು ಸಮಂತಾ ಜೊತೆ ಜಾನು ಆಗಿ ರಿಮೇಕ್ ಮಾಡಲಾಯಿತು. ಆದರೆ ತೆಲುಗಿನಲ್ಲಿ ಸಿನಿಮಾ ಕ್ಲಿಕ್ ಆಗಲಿಲ್ಲ.