ಅಲ್ಲು ಅರ್ಜುನ್ಗೆ ಯುಎಇ ಗೋಲ್ಡನ್ ವೀಸಾ ಸಿಕ್ಕಿದ್ದು ಅದರ ಫೊಟೋ ವೈರಲ್ ಆಗಿದೆ. ಅಲ್ಲು ಅರ್ಜುನ್ ಯುಎಇ ಸರ್ಕಾರದಿಂದ ಗೋಲ್ಡನ್ ವೀಸಾ ಪಡೆದು ಫೋಟೋ ಹಂಚಿಕೊಂಡಿದ್ದಾರೆ.
2/ 7
ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ಗೋಲ್ಡನ್ ವೀಸಾವನ್ನು ನೀಡಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅವು ವೈರಲ್ ಆಗುತ್ತಿವೆ.
3/ 7
ತಮ್ಮ ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಯುಎಇ ಸರ್ಕಾರವು ಅನೇಕ ದೇಶಗಳ ಸೆಲೆಬ್ರಿಟಿಗಳಿಗೆ ಗೋಲ್ಡನ್ ವೀಸಾಗಳನ್ನು ನೀಡುತ್ತದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
4/ 7
ಗೋಲ್ಡನ್ ವೀಸಾ ಪಡೆದ ಫೋಟೋವನ್ನು ಅಲ್ಲು ಅರ್ಜುನ್ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಯುಎಇ ಅಧಿಕಾರಿಗಳಿಗೆ ಅಲ್ಲು ಅರ್ಜುನ್ ಧನ್ಯವಾದ ತಿಳಿಸಿದ್ದಾರೆ. ಗೋಲ್ಡನ್ ವೀಸಾ ಪಡೆದಿದ್ದಕ್ಕಾಗಿ ಹಲವರು ಅರ್ಜುನ್ ಅವರನ್ನು ಅಭಿನಂದಿಸಿದ್ದಾರೆ.
5/ 7
ಯುಎಇ ಸರ್ಕಾರವು ಅನೇಕ ದೇಶಗಳ ಸೆಲೆಬ್ರಿಟಿಗಳಿಗೆ ಗೋಲ್ಡನ್ ವೀಸಾ ನೀಡುತ್ತದೆ. ಅದನ್ನು ಪಡೆದವರು ಯಾವುದೇ ಪರವಾನಗಿ ಇಲ್ಲದೆ ಯುಎಇಯಲ್ಲಿ ವಾಸಿಸಬಹುದು, ಕೆಲಸ ಮಾಡಬಹುದು ಅಥವಾ ವ್ಯಾಪಾರ ಮಾಡಬಹುದು.
6/ 7
ಪುಷ್ಪಾ ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ಈಗ ಅಪಾರವಾಗಿ ಹೆಚ್ಚಿದೆ.
7/ 7
‘ಪುಷ್ಪ: ದಿ ರೈಸ್’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸುನೀಲ್, ಅಜಯ್, ಅನಸೂಯ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ‘ಪುಷ್ಪ: ದಿ ರೂಲ್’ ಸಿನಿಮಾದ ಕೆಲಸ ಶುರುವಾಗಿದೆ.