ಶುಕ್ರವಾರ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ ವಿಜಯಪುರದ ಅಪ್ಪು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿ ನಗರದಲ್ಲಿ ಬ್ಯಾನರ್ ಕಟೌಟ್ ಹಾಕಿದ್ದರು. ಆದ್ರೆ ರಾತ್ರಿ ಈ ಭಾವಚಿತ್ರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಘಟನೆ ವಿಜಯಪುರ ನಗರದ ಆಶ್ರಮ ಬಳಿ ಈ ಘಟನೆ ನಡೆದಿದೆ. ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಪುನೀತ್ ಅಭಿಮಾನಿಗಳು ಆಗ್ರಹಿಸಿದ್ದಾರೆ.