ಮೃತ ಅಭಿಮಾನಿಯ ಕುಟುಂಬದ ಕುರಿತು ಭಾವುಕರಾಗಿ ಟ್ವೀಟ್​ ಮಾಡಿದ ಪುನೀತ್​ ರಾಜ್​ಕುಮಾರ್​..!

ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಯ ಕುಟುಂಬದವರು ಮೃತ ಮಗನ ಫೋಟೋವನ್ನು ಚಿತ್ರಮಂದಿರದ ಸೀಟ್​ ಮೇಲೆ ಇಟ್ಟುಕೊಂಡು ಯುವರತ್ನ ಸಿನಿಮಾ ನೋಡಿದ್ದಾರೆ. ಹರಿಕೃಷ್ಣನ್​ ಎಂಬ ಬಾಲಕ​ ಪುನೀತ್ ರಾಜ್​ಕುಮಾರ್​ ಅವರ ಅಭಿಮಾನಿಯಾಗಿದ್ದು, 3 ತಿಂಗಳ ಹಿಂದೆ ಈಜಲು ಹೋಗಿ ಸಾವನ್ನಪ್ಪಿದ್ದರು. ಈ ಬಾಲಕನ ಪೋಷಕರು ಮಗನ ಇಷ್ಟದ ನಟ ಪುನೀತ್ ಅವರ ಯುವರತ್ನ ಸಿನಿಮಾವನ್ನು ಮಗ ಫೋಟೋ ಜತೆಗೆ ವೀಕ್ಷಿಸಿದ್ದಾರೆ. ಈ ವಿಷಯ ತಿಳಿದ ಪುನೀತ್​ ಭಾವುಕರಾಗಿ ಟ್ವೀಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: